ವಿಮುಕ್ತಿ ಸಂಸ್ಥೆಗೆ ಸುವರ್ಣ ಮಹೋತ್ಸವ; ಡಿ. 7: ಉಜಿರೆಯಲ್ಲಿ 20 ನೇ ವರ್ಷದ ಮಹಿಳಾ ಸಮಾವೇಶ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕಪುಚಿನ್ ಕೃಷಿ ಸೇವಾ ಕೇಂದ್ರ ವಿಮುಕ್ತಿ ಗ್ರಾಮಾಭಿವೃದ್ಧಿ ಯೋಜನೆ ಲಾಲ ಇದರ ಸೇವಾ ಚಟುವಟಿಕೆ ಆರಂಭವಾಗಿ ೫೦ ವರ್ಷಗಳು ಪೂರ್ತಿಯಾಗುತ್ತಿದ್ದು, ಇದರ ಸಂಭ್ರಮವನ್ನು ವಿಶಿಷ್ಟ್ಯ ರೀತಿಯಲ್ಲಿ ಆಚರಿಸುವ ಬದಲು ಸಂಸ್ಥೆ ನಡೆಸುವ ವಿಮುಕ್ತಿ ಸ್ವ ಸಹಾಯ ಸಂಘಗಳ ಒಕ್ಕೂಟ ನೇತೃತ್ವ ಕೊಡುವ 20 ನೇ ವರ್ಷದ ಮಹಿಳಾ ಸಮಾವೇಶ ಡಿ. 7 ರಂದು ಉಜಿರೆ ಜನಾರ್ದನ ದೇವಸ್ಥಾನದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಎಂದು ಸಂಸ್ಥೆಯ ನಿರ್ದೇಶಕ ವಿನೋದ್ ಮಸ್ಕರೇನ್ಹಸ್, ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಇಂದಿರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ವರ್ಗಾಭವನದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ವಿದ್ಯಾರ್ಥಿ ಸ್ನೇಹಿ ಯೋಜನೆಗೆ ಚಾಲನೆ:
ವಿಮುಕ್ತಿ ಸಂಸ್ಥೆಯ ಪ್ರಾರಂಭಿಕ ಸೇವಕರಾಗಿದ್ದು ಇದೀಗ ಅಗಲಿರುವ ರೆ. ಫಾ. ಥಿಯೋಪಿಲಸ್ ಪಿರೇರಾ ಅವರ ಸಂಸ್ಮರಣಾರ್ಥ ಇದೇ ವೇದಿಕೆಯಲ್ಲಿ “ವಿದ್ಯಾರ್ಥಿ ಸ್ನೇಹಿ” ಯೋಜನೆಗೆ ಚಾಲನೆ ನೀಡಲಾಗುವುದು. ನಮ್ಮ ಸ್ವ ಸಹಾಯ ಸಂಘಗಳ ಸದಸ್ಯರ ವ್ಯಾಪ್ತಿಯ ಬಡ ಅರ್ಹ ಕುಟುಂಬದಿಂದ ಉನ್ನತ ವಿದ್ಯಾಭ್ಯಾಸ ಹೊಂದಲು ಬಯಸುವ ವಿದ್ಯಾರ್ಥಿಗಳಿಗಾಗಿ ಬಡ್ಡಿ ರಹಿತ ಸಾಲ ಯೋಜನೆ ಇದರಲ್ಲಿ ಒಳಗೊಂಡಿದೆ ಎಂದರು.
ಸಮಾವೇಶಕ್ಕೂ ಮುನ್ನ 2 ಸಾವಿರ ಮಹಿಳೆಯರಿಂದ ರ್‍ಯಾಲಿ:
ವಿಮುಕ್ತಿ ಸ್ವ ಸಹಾಯ ಸಂಘಗಳ ಟ್ರಸ್ಟ್ ವತಿಯಿಂದ ನಡೆಯುವ ಈ 20 ನೇ ವರ್ಷದ ಈ ಮಹಿಳಾ ಸಮಾವೇಶಕ್ಕೂ ಮುನ್ನ ಎಸ್‌ಡಿಎಂ ಮೈದಾನದಿಂದ 2 ಸಾವಿರದಷ್ಟು ಮಹಿಳೆಯರ ರಿಯಾಲಿ ನಡೆಯಲಿದೆ. ಬಳಿಕ ನಡೆಯುವ ಸಮಾವೇಶದವನ್ನು ಖ್ಯಾತ ಸಾಹಿತಿ ಡಾ| ವೈದೇಹಿ ಉದ್ಘಾಟಿಸಲಿದ್ದಾರೆ.ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ತು ಶಾಸಕ ಹರೀಶ್ ಕುಮಾರ್ ಮತ್ತು ಐವನ್ ಡಿಸೋಜಾ, ಮಾಜಿ ಶಾಸಕ ವಸಂತ ಬಂಗೇರ, ಮತ್ತು ಜೆ.ಆರ್ ಲೋಬೋ, ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆಯ ಪಾಲುಗಾರಿಕಾ ವ್ಯವಸ್ಥಾಪಕಿ ಅರುಣಾ ಕಾತಿ, ಮಹಿಳಾ ಪ್ರತಿನಿಧಿಗಳಾಗಿ ಬಣಕಲ ವಿಮುಕ್ತಿ ಒಕ್ಕೂಟದ ಯಶೋಧಾ, ವಿಮುಕ್ತಿ ವೈತ್ರಿ ಕೋ ಆಪರೇಟಿವ್ ಸೊಸೈಟಿ ಚಿಕ್ಕೋಡಿ ಅಧ್ಯಕ್ಷೆ ಹೇಮಾದೊಡಮನಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಮುಕ್ತಿ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಇಂದಿರಾ, ವಿಮುಕ್ತಿ ಸಹಾಯಕ ನಿರ್ದೇಶಕ ರೆ. ಫಾ. ರೋಹನ್ ಲೋಬೋ, ಲಿಕ್ಕಿಗರಾದ ಲವೀನಾ ಫೆರ್ನಾಂಡಿಸ್ ಮತ್ತು ಸ್ವಸಹಾಯ ಸಂಘಗಳ ಉಸ್ತುವಾರಿ ಪೂರ್ಣಿಮಾ ಮೋನಿಸ್ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.