ಶಮಿತಾ ಕಾಂಪ್ಲೆಕ್ಸ್ ನೂತನ ಕಟ್ಟಡ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ನೂತನವಾಗಿ ನಿರ್ಮಿಸಿರುವ ಪ್ರಕಾಶ್ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಇಂದು(ಡಿ.4)ರಂದು ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ವಿಜಯರಾಘವ ಪಡ್ವೆಟ್ನಾಯ ನೆರವೇರಿಸಿದರು.

ಈ ಸಂದರ್ಭದಲ್ಲಿ ಅಳದಂಗಡಿ ಅಜಿಲ ಸೀಮೆಯ ತಿಮ್ಮಣ್ಣರಸ ಡಾ| ಪದ್ಮಪ್ರಸಾದ ಅಜಿಲ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ ಯಶೋವರ್ಮ, ನೋಟರಿ ನ್ಯಾಯವಾದಿ ಪ್ರತಾಪಸಿಂಹ ನಾಯಕ್, ಶಮಿತಾ ಕಾಂಪ್ಲೆಕ್ಸ್ ಇದರ ಮಾಲಕ ಪುಷ್ಪರಾಜ್ ಶೆಟ್ಟಿ ಅವರ ಮಾತೃಶ್ರೀ ಇಂದಿರಾ ಶೆಟ್ಟಿ, ಸಹೋದರ, ಕಾರ್ಕಳದ ಹೆಸರಾಂತ ಹೊಟೇಲ್ ಉದ್ಯಮಿ ಪ್ರಕಾಶ್ ಶೆಟ್ಟಿ, ಮಾವ ರಘು ಶೆಟ್ಟಿ, ಅತ್ತೆ ವಿಜಯಲಕ್ಷ್ಮೀ ಆರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪುಷ್ಪರಾಜ್ ಶೆಟ್ಟಿ ಅವರ ಆಪ್ತರಾದ ಉದ್ಯಮಿ ರಾಜೇಶ್ ಶೆಟ್ಟಿ, ಆರ್.ಎಮ್ ಅರ್ತ್ ಮೂವರ್‍ಸ್‌ನ ರವಿ ಚಕ್ಕಿತ್ತಾಯ, ಅಶೋಕ ಚಕ್ಕಿತ್ತಾಯ, ಮಂಜುನಾಥ ರೈ ಎನ್., ಅಜಿತ್ ಕುಮಾರ್ ಜೈನ್ ನಡ, ಅಜಿತ್ ಕುಮಾರ್ ಕೋರ್‍ಯಾರು, ದಿನೇಶ್ ಗೌಡ, ಅಬ್ದುಲ್ಲತೀಫ್, ರಾಧಾಕೃಷ್ಣ, ಸುಭಾಶ್ಚಂದ್ರ ಪಡ್ಯೋಡಿಗುತ್ತು, ಪತ್ರಕರ್ತ ಶಿಬಿ ಧರ್ಮಸ್ಥಳ, ವಿಶ್ವನಾಥ ಲಾಯಿಲ,ರಾಜೇಶ್ ಶೆಟ್ಟಿ ಲಾಯಿಲ, ಅಜಿತ್ ಕುಮಾರ್ ಇಂದಬೆಟ್ಟು ಮೊದಲಾದವರು ಭಾಗಿಯಾಗಿದ್ದರು.

ಆಗಮಿಸಿದ ಗಣ್ಯರನ್ನು ಮಾಲಕರಾದ ಪುಷ್ಪರಾಜ್ ಶೆಟ್ಟಿ, ಪತ್ನಿ ಸುಮನಾ ಶೆಟ್ಟಿ, ಮಕ್ಕಳಾದ ಶಾಲ್ಮಲಿ ಮತ್ತು ಶಮಿತ್ ಬರಮಾಡಿಕೊಂಡು ಗೌರವಿಸಿದರು

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.