ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ ಏಳನೇ ವರ್ಷದ ವಾರ್ಷಿಕೋತ್ಸವ; ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾಟ :: ಗುರುವಂದನಾ, ಸನ್ಮಾನ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕುತ್ಲೂರು:24(ನ.) ಶಿವಶಕ್ತಿ ಫ್ರೆಂಡ್ಸ್‌ ಕ್ಲಬ್ ಕುತ್ಲೂರು ಇದರ ಏಳನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಅಂತರ್ ಜಿಲ್ಲಾ ಮಟ್ಟದ 58 ಕೆ.ಜಿ ವಿಭಾಗ ಹಾಗೂ ವಲಯ ಆಹ್ವಾನಿತ ತಂಡಗಳ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಕುತ್ಲೂರು ಮೈದಾನದಲ್ಲಿ ನಡೆಯಿತು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾವಿ ಗ್ರಾಮಪಂಚಾಯತ್ ಅಧ್ಯಕ್ಷರಾದ ರವೀಂದ್ರ ಪೂಜಾರಿ ಬಾಂದೊಟ್ಟು ವಹಿಸಿದ್ದರು….ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಶಶಿಕಾಂತ ಆರಿಗ ಪಾಂಡೆಪ್ಪರೆಗುತ್ತು,ಪ್ರಭಾಕರ್ ಬುಣ್ಣು,ಕುತ್ಲೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ತುಂಗಪ್ಪ ಪೂಜಾರಿ,ವಿಶ್ವಕರ್ಮ ಯುವ ಮಿಲನ್(ರಿ.) ಬೆಳ್ತಂಗಡಿ ಇದರ ಅಧ್ಯಕ್ಷ ಮಂಜುನಾಥ್ ಆಚಾರ್ಯ ಅಳದಂಗಡಿ,ಸಂತೋಷ್ ಹೆಗ್ಡೆ ಶಿವನಾಗ ಕೊಕ್ರಾಡಿ,ನಾರಾವಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಕೋದಂಡರಾಮ್ ಎಚ್,ನಿಮಿತ್ ಜೈನ್, ಗ್ರಾಂ ಪ ಸದಸ್ಯರಾದ ಸಂತೋಷ್, ಪ್ರಮೀಳಾ ಆರ್ ಭಟ್, ಕು.ಗಿರಿಜಾ ಉಪಸ್ಥಿತರಿದ್ದರು.ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಕುತ್ಲೂರು ಇದರ ಅಧ್ಯಕ್ಷರಾದ ಸತೀಶ್ ಪಡಿವಾಳ್ ವಹಿಸಿದ್ದರು

ಮುಖ್ಯ ಅತಿಥಿಗಳಾಗಿ ಮಾತನಾಡಿದ ಬೆಳ್ತಂಗಡಿ ನೋಟರಿ ವಕೀಲರಾದ ಮುರಳಿ ಬಿ ಅವರು ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಈ ಊರಿನ ಶಕ್ತಿ ಮತ್ತು ಆಸ್ತಿ ಇದ್ದಂತೆ ಈ ಆಸ್ತಿಯನ್ನು ಕಾಪಾಡಿಕೊಂಡು ಹೋಗಬೇಕಾದರೆ ಊರಿನ ಜನರ ಸಹಕಾರ ಅತ್ಯಗತ್ಯ, ಪ್ರತೀ ಗ್ರಾಮದಲ್ಲಿ ಇಂತಹ ಸಂಘಟನೆ ನೋಡಲು ಬಯಸುತ್ತಾರೆ,ಕುತ್ಲೂರು ಗ್ರಾಮದಲ್ಲಿ ವಿಭಿನ್ನ ಕೆಲಸಗಳನ್ನು ಮಾಡುತ್ತ ,ಗ್ರಾಮದ ಎಲ್ಲಾ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಮಾಜಿಕ,ಧಾರ್ಮಿಕ, ಕ್ರೀಡಾ ಕ್ಷೇತ್ರದಲ್ಲಿಯೂ ಮುನ್ನೆಡೆಸುವ ಸಂಸ್ಥೆ ಇದ್ದರೆ ಅದು ಈ ಗ್ರಾಮದ ಶಿವಶಕ್ತಿ ಫ್ರೆಂಢ್ಸ್ ಕ್ಲಬ್ ತಂಡಕ್ಕೆ ಸಲ್ಲುತ್ತದೆ.ಇಂತಹ ಯುವಕರ ತಂಡದ ಜವಾಬ್ದಾರಿಯುತವಾದ ಕೆಲಸ, ಶಿಸ್ತು,ಸಂಯಮದ ಪ್ರತೀಕ ಇಂದಿನ ಕಬಡ್ಡಿ ಪಂದ್ಯಾಟದ ಆಯೋಜನೆ ನೋಡಿಯೇ ಗೊತ್ತಾಗುತ್ತದೆ.ಇಂತಹ ತಂಡಕ್ಕೆ ನನ್ನ ಸಹಕಾರ ಯಾವತ್ತೂ ಇದೆ ಎಂದು ಶ್ಲಾಘ್ಲೀಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ತಂಗಡಿ ಬಿ.ಜೆ.ಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಶಿವಶಕ್ತಿ ಕುತ್ಲೂರು ಸತತ 7 ವರ್ಷಗಳಲ್ಲಿ ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದಾರೆ ಅವರ ಪ್ರೀತಿಗೆ ನಾನು ಚಿರಋಣಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜರು ಯುವಕನ್ನು ಒಗ್ಗೂಡಿಸಿ ಇಡೀ ತಾಲ್ಲೂಕಿನಲ್ಲಿ ಕೆಲಸ ಕಾರ್ಯ ಮಾಡುತ್ತಿದ್ದಾರೆ,ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಗೆ ಶಾಸಕ ಹರೀಶ್ ಪೂಂಜರ ಜೊತೆ ಮಾತನಾಡಿ ಸೂಕ್ತ ನಿವೇಶನ ಹಾಗೂ ಸರಕಾರದಿಂದ ಸವಲತ್ತು ಸಿಗುವ ಹಾಗೆ ನನ್ನ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಫ್ರೆಂಡ್ಸ್ ಸುರತ್ಕಲ್,ತುಳುನಾಡ ಬಿರುವೆರ್ ಇದರ ಅಧ್ಯಕ್ಷರಾದ ಲೋಕೆಶ್ ಕೊಡಿಕೆರೆ,ಕಂಬಳ ಕ್ಷೇತ್ರದ ಯಜಮಾನ ಕೃಷ್ಣಪ್ಪ ಪೂಜಾರಿ ಮರೋಡಿ,ನಾರಾವಿ ಗ್ರಾಂ.ಪ ಸದಸ್ಯರಾದ ಉದಯ ಹೆಗ್ಡೆ, ರಾಜವರ್ಮ ಜೈನ್, ರಾಮಚಂದ್ರ ಭಟ್, ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದಲ್ಲಿ ಕುತ್ಲೂರು ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಆದರ್ಶ ಶಿಕ್ಷಕರಿಗೆ ಗುರುವಂದನೆ ಕಾರ್ಯಕ್ರಮ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು…ಈ ಸಂದರ್ಭದಲ್ಲಿ ಕ್ಲಬ್ ನ ಸಲಹೆಗಾರರಾದ ರಾಧಾಕೃಷ್ಣ ಹೆಗ್ಡೆ, ಸಂತೋಷ್ ಮೆಲ್ವಿನ್ ತಾವ್ರೋ,ರಾಮ್ ಪ್ರಸಾದ್ ಎನ್.ಎಸ್ ಆಚಾರ್ಯ, ರವಿಪ್ರಸಾದ್ ಗೋಕುಲ,ಸುಜಿತ್ ದೇವಾಡಿಗ,ಸತೀಶ್ ನಾಯ್ಕ್, ಹಾಗೂ ಕ್ಲಬ್ ಪದಾದೀಕಾರಿಗಳಾದ ಶಿವರಾಜ್ ಅಂಚನ್,ದೀಕ್ಷಿತ್, ಗುರುಪ್ರಸಾದ್,ರೂಪೇಶ್,ರಂಜಿತ್, ಪ್ರದೀಪ್,ರಾಮೇಶ್ವರ, ಅಶ್ವಿತ್ ದೇವಾಡಿಗ ಮತ್ತು ಸರ್ವಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಕ್ಲಬ್ ನ ಅಧ್ಯಕ್ಷ ಸುರೇಶ್ ಕುತ್ಲೂರು ಸ್ವಾಗತಿಸಿ,ಉಮಕಾಂತ ಆರಿಗ ಧನ್ಯವಾದವಿತ್ತರು,ಸತೀಶ್ ಸಮೃದ್ದಿ ಕಾರ್ಯಕ್ರಮ ನಿರೂಪಿಸಿದರು.ವಲಯ ಮಟ್ಟದ ಕಬಡ್ಡಿಯಲ್ಲಿ ಶಿವಶಕ್ತಿ ಕುತ್ಲೂರು ಪ್ರಥಮ,ಎಂ.ಎಸ್.ಸಿ ಸುಲ್ಕೇರಿ ದ್ವಿತೀಯ,ಎಸ್.ಎಮ್.ಎಚ್ ತೃತೀಯ,ಪರಸ್ಪರ ನಾರಾವಿ ಚತುರ್ಥ ಸ್ಥಾನ ಹಾಗೂ ಅಂತರ್ ಜಿಲ್ಲಾ ಮಟ್ಟದ ಕೆ.ಜಿ ವಿಭಾಗದಲ್ಲಿ ಪರಸ್ಪರ ನಾರಾವಿ ಪ್ರಥಮ,ತೆನ್ಕಾಕಾಣಿಯೂರ್ ಉಡುಪಿ ದ್ವಿತೀಯ,ಶಿವಶಕ್ತಿ ಕುತ್ಲೂರು ತೃತೀಯ,ವೈ.ಸಿ ಮುಂಡಾಜೆ ಚತುರ್ಥ ಸ್ಥಾನ ಪಡೆಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.