ರಾಜ್ಯ ವಿಕಲಚೇತನರ ಒಕ್ಕೂಟ ಜಿಲ್ಲಾಧ್ಯಕ್ಷರಾಗಿ ಸಿ.ಕೆ ಚಂದ್ರಕಲಾ

ಬೆಳ್ತಂಗಡಿ: ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ಇದರ ಜಿಲ್ಲಾಧ್ಯಕ್ಷರಾಗಿ ಜಿ.ಪಂ ಮಾಜಿ ಸದಸ್ಯೆ ಹಾಗೂ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ ಉಜಿರೆ ಆಯ್ಕೆಯಾಗಿದ್ದಾರೆ.
ಚಂದ್ರಕಲಾ ಅವರು ಸ್ವತಃ ಬೆಂಕಿಯ ಅವಘಡದಿಂದ ಕೈ ಬೆರಳು ಸುಟ್ಟಿರುವ ವಿಕಲಚೇತನೆಯಾಗಿದ್ದು ಸಾಮಾಜಿಕ ಚಟುವಟಿಕೆಯಲ್ಲಿ ಜಿಲ್ಲಾ, ರಾಜ್ಯಮಟ್ಟದ ಪ್ರಶಸ್ತಿಗಳಲ್ಲದೆ, ರಾಷ್ಟ್ರಪತಿಗಳಿಂದಲೂ ಪದಕ ಪಡೆದವರಾಗಿರುತ್ತಾರೆ.
ತಾಲೂಕು ಯುವಜನ ಒಕ್ಕೂಟ ಉಪಾಧ್ಯಕ್ಷೆಯಾಗಿ, ತಾ| ಶಿಕ್ಷಣ ಸಂಪನ್ಮೂಲ ಕೇಂದ್ರದ ಜೊತೆ ಕಾರ್ಯದರ್ಶಿಯಾಗಿ ಸೇರಿದಂತೆ ಅನೇಕ ಸಾಮಾಜಿಕ ಸಂಘಟನೆಗಳಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಹಿರಿಯ ನಾಗರಿಕರಿಗೆ ಮಾಸಾಶನ ಒದಗಿಸಿಕೊಡುವುದು, ವಿಧವಾ ವೇತನ, ವಿಕಲಾಂಗ ವೇತನ, ವೃದ್ದಾಪ್ಯ ವೇತನ ಮೊದಲಾದ ಸರಕಾರಿ ಸೌಲಭ್ಯ ಮಾಹಿತಿ ನೀಡಿ ಅದರ ಪ್ರಯೋಜವನ್ನು ಒದಗಿಸಿಕೊಡುವಲ್ಲಿ ಶ್ರಮವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.