ಪಿಡಿಒ ಅಧಿಕಾರದ ದರ್ಪ ಆರೋಪ ಎಸ್‌ಡಿಪಿಐ ಯಿಂದ ತಹಶಿಲ್ದಾರರಿಗೆ ಮನವಿ

Advt_NewsUnder_1
Advt_NewsUnder_1

ಬೆಳ್ತಂಗಡಿ: ಬಳೆಂಜ ಗ್ರಾಮ ಪಂಚಾಯತ್‌ನ ಪಿ.ಡಿ.ಒ ಸುಧಾಮಣಿ ಅವರು ಅಧಿಕಾರ ದರ್ಪದಿಂದ ಜನತೆಗೆ ತೊಂದರೆಯಾಗುತ್ತಿದೆ ಎಂದು ಜನರ ಒತ್ತಾಶೆಯ ಮೇರೆಗೆ ಎಸ್‌ಡಿಪಿಐ ಬೆಳ್ತಂಗಡಿ ತಹಶಿಲ್ದಾರರಿಗೆ ದೂರು ನೀಡಿದೆ.
ಪಿಡಿಒ ಅವರು ತಮ್ಮ ಅಧಿಕಾರದ ದರ್ಪವನ್ನು ಗ್ರಾಮದ ಜನಸಾಮಾನ್ಯರ ಮೇಲೆ ತೋರಿಸುತ್ತಾ ಸತಾಯಿಸುತ್ತಿದ್ದಾರೆ.
ನಾಗರಿಕರೊಂದಿಗೆ ಏಕವಚನದಲ್ಲಿ ಸಂಬೋಧಿಸುತ್ತಾರೆ ಎಂಬ ವಿಷಯ ಅರಿತ ಸ್ಥಳೀಯ ಎಸ್‌ಡಿಪಿಐ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಪಿಐ ತಾ| ಅಧ್ಯಕ್ಷ ನವಾಝ್‌ಶರೀಫ್  ಕಟ್ಟೆ, ಗ್ರಾ, ಸಮಿತಿ ಅಧ್ಯಕ್ಷ ಹಸನ್ ಕಟ್ಟೆ, ಕಾರ್ಮಿಕ ಘಟಕದ ಕಾರ್ಯದರ್ಶಿ ಶಮೀಮ್ ಯೂಸುಫ್, ನಿಝಾಮ್, ಇರ್ಶಾದ್ ಮತ್ತು ಶರೀಪ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.