ಮಂಜೊಟ್ಟಿ : ಸ್ಟಾರ್‌ಲೈನ್ ಕ್ರೀಡಾಕೂಟ

Advt_NewsUnder_1
Advt_NewsUnder_1

ಮಂಜೊಟ್ಟಿ : ಸ್ಟಾರ್‌ಲೈನ್ ಆಂಗ್ಲ ಮಾಧ್ಯಮ ಶಾಲೆ ಮಂಜೊಟ್ಟಿ ಇದರ ಪ್ರಥಮ ವಾರ್ಷಿಕ ಕ್ರೀಡಾಕೂಟವು ಇತ್ತೀಚೆಗೆ ಸ್ಟಾರ್‌ಲೈನ್ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕ್ರೀಡಾಕೂಟಕ್ಕೆ ಸ್ಟಾರ್‌ಲೈನ್ ಶಾಲೆಯ ಸಂಚಾಲಕ ಜನಾಬ್ ಸಯ್ಯದ್ ಹಬೀಬ್ ಚಾಲನೆ ನೀಡಿದರು. ಕ್ರೀಡಾಜ್ಯೋತಿಯನ್ನು ಶಾಲೆಯ ನಾಯಕ ಮೊಹಮ್ಮದ್ ಫಾಝಿಲ್ ನಾಯಕತ್ವದಲ್ಲಿ ಮಂಜೋಟ್ಟಿ ಪಟ್ಟಣವಾಗಿ ಶಾಲೆಗೆ ತರಲಾಯಿತು. ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಖ್ಯಾತ ವಕೀಲ ಶಶಿಕಿರಣ್ ಜೈನ್ ಕ್ರೀಡಾಜ್ಯೋತಿಯನ್ನು ಬೆಳಗಿಸಿ ಕ್ರೀಡಾಕೂಟಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಶಶಿಕಿರಣ್ ಜೈನ್ ಸ್ಟಾರ್‌ಲೈನ್ ವಿದ್ಯಾಸಂಸ್ಥೆಯ ಭವಿಷ್ಯದಲ್ಲಿ ದೇಶಕ್ಕೆ ಉತ್ತಮ ಕ್ರೀಡಾಪಟುಗಳನ್ನು ನೀಡುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಸಂಚಾಲಕ ಜನಾಬ್ ಸಯ್ಯದ್ ಹಬೀಬ್, ಕಾರ್ಯದರ್ಶಿ ಸಯ್ಯದ್ ಮೊಹಮ್ಮದ್ ಅಯ್ಯೂಬ್, ಹಾಗೂ ಖಚಾಂಚಿ ಸಯ್ಯದ್ ಮೊಹಮ್ಮದ್ ಇರ್ಫಾನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಜಾಕಿನ್ ಬಿನ್ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.