HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಧರ್ಮಸ್ಥಳ ಎಸ್‌ಐ ಆಗಿ ಓಡಿಯಪ್ಪ ಗೌಡ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ಬೆಳ್ತಂಗಡಿ ಟ್ರಾಫಿಕ್ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿದ್ದ ಓಡಿಯಪ್ಪ ಗೌಡ ಅವರು ಮುಂದಕ್ಕೆ ಧರ್ಮಸ್ಥಳ ಠಾಣೆಯ ಎಸ್‌ಐ ಆಗಿ ವರ್ಗಾವಣೆಗೊಂಡಿದ್ದು ನ. 18ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಅವಿಭಜಿತ ದ. ಕ ಉಡುಪಿ ಜಿಲ್ಲೆ ಸಂಯುಕ್ತವಾಗಿರುವ ವೇಳೆ ಕಾರ್ಕಳ ಮತ್ತು ಉಡುಪಿಯಲ್ಲಿ ಕಾನ್ಸ್‌ಟೇಬಲ್ ಆಗಿ ಪೊಲೀಸ್ ಇಲಾಖೆ ಕರ್ತವ್ಯಕ್ಕೆ ಸೇರಿದ ಅವರು ಮೂಡಬಿದ್ರೆ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು, ಕಳಸ, ಚಿಕ್ಕಮಗಳೂರು ಇತ್ಯಾಧಿ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿರುವ ವೇಳೆ ಎಎಸ್‌ಐ ಆಗಿ ಪದೋನ್ನತಿ ಹೊಂದಿದ್ದರೆ, ಬಳಿಕ ವೇಣೂರು ಠಾಣೆಯಿಂದ ಎಸ್‌ಐ ಆಗಿ ಪದೋನ್ನತಿ ಹೊಂದಿದ್ದಾರೆ. ವಿಧಾನ ಸಭೆ ಮತ್ತು ಲೋಕ ಸಭೆ ಚುನಾವಣೆ ಸಮಯ ಕಳಸ ಮತ್ತು ಚಿಕ್ಕಮಗಳೂರು ಠಾಣೆಗಳಲ್ಲಿ ಎಸ್‌ಐ ಆಗಿ ಕರ್ತವ್ಯ ಸಲ್ಲಿಸಿ, ಬಳಿಕ ಮತ್ತೆ ಟ್ರಾಫಿಕ್ ಎಸ್.ಐ ಆಗಿ ಬೆಳ್ತಂಗಡಿಯಲ್ಲೇ ಕರ್ತವ್ಯದಲ್ಲಿ ಮುಂದುವರಿದಿದ್ದರು. ಇದೀಗ ವರ್ಗಾವಣೆಗೊಂಡು ಧರ್ಮಸ್ಥಳ ಎಸ್.ಐ ಆಗಿ ಮುಂದುವರಿಯಲಿದ್ದಾರೆ.
ಧರ್ಮಸ್ಥಳ ಎಸ್‌ಐ ಆಗಿದ್ದ ಅವಿನಾಶ್ ಬಂಟ್ವಾಳಕ್ಕೆ:
ಇದುವರೆಗೆ ಧರ್ಮಸ್ಥಳ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಆಗಿದ್ದ ಅವಿನಾಶ್ ಗೌಡ ಅವರು ಬಂಟ್ವಾಳ ನಗರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ದಕ್ಷ ಅಧಿಕಾರಿಯಾಗಿದ್ದ ಅವರ ಅವಧಿಯಲ್ಲಿ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಅವರು ಯಶಸ್ವಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.