ಬಳಂಜ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಮಹಾರಂಗಪೂಜೆ

Advt_NewsUnder_1
Advt_NewsUnder_1

ಬಳಂಜ : ಇತಿಹಾಸ ಪ್ರಸಿದ್ಧ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವರ ಸನ್ನಿಧಿಯಲ್ಲಿ ವೇದಮೂರ್ತಿ ನಡ್ವಂತಾಡಿ ಶ್ರೀ ಬಾಲಕೃಷ್ಣ ಪಾಂಗಣ್ಣಾಯ ತಂತ್ರಿಗಳ ಮತ್ತು ಶ್ರೀ ಶಂಕರನಾರಾಯಣ ಭಟ್ ಇವರ ನೇತೃತ್ವದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಮಹಾರಂಗಪೂಜೆಯು ನ.18ರಂದು ನಡೆಯಿತು.

ಗಡಿ ಪ್ರಧಾನರಾದ ಅರುಣ್ ಹೆಗ್ಡೆ, ಅಶ್ವಥ್ ಹೆಗ್ಡೆ ಕುಳಂಜಿ ರೋಡಿಗುತ್ತು ಕುಟುಂಬಸ್ಥರಿಂದ ಮಹಾರಂಗಪೂಜೆ ಸೇವೆ ನಡೆಯಿತು. ಶ್ರೀ ದೇವರ ಬಲಿ ಮತ್ತು ಕಾರ್ತಿಕ ದೀಪೋತ್ಸವದಲ್ಲಿ ಸುಮಾರು ನೂರಾರು ಭಕ್ತರು ಭಾಗವಹಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರಾದ ಬಿ.ಶೀತಲ್ ಪಡಿವಾಳ್, ವ್ಯವಸ್ಥಾಪನ ಸಮಿತಿ ಸದಸ್ಯರು, ಊರ-ಪರವೂರ ಭಕ್ತಾಧಿಗಳು ಭಾಗವಹಿಸಿದ್ದರು. ಸಂಜೆ ಕಾರ್ಯಕ್ರಮದ ಪ್ರಯುಕ್ತ ಬಳಂಜ ಶ್ರೀ ಪಂಚಲಿಂಗೇಶ್ವರ ಸಭಾ ಮಂದಿರದಲ್ಲಿ ಜಿಲ್ಲೆಯ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಬೀಷ್ಮೋಪದೇಶ ಯಕ್ಷಗಾನ ತಾಳಮದ್ದಳೆ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.