HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕೊಯ್ಯೂರು: ಯಕ್ಷಗಾನ ತಾಳಮದ್ದಳೆ ಪಂಚಾಹ – 2019

ಧಾರ್ಮಿಕ ಪ್ರಜ್ಞೆ ಮತ್ತು ಆರೋಗ್ಯ ಪೂರ್ಣ ಚಿಂತನೆಗೆ ಯಕ್ಷಗಾನ ಪ್ರೇರಣೆಯಾಗಿದೆ (ನಂದ ಕುಮಾರ್ ತಂತ್ರಿ ಕೊಯ್ಯೂರು)

ಕೊಯ್ಯೂರು:ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೊಯ್ಯೂರು, ಶ್ರೀ ಪಂಚದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಕೊಯ್ಯೂರು, ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೊಯ್ಯೂರು ಇವರ ಸಂಯುಕ್ತ ಆಶ್ರಯದಲ್ಲಿ ನ.16 ರಂದು ದೇವಸ್ಥಾನದ ಗೋಪುರದಲ್ಲಿ ಜರಗಿತು.


ಯಕ್ಷಗಾನ ತಾಳಮದ್ದಳೆ ಪಂಚಾಹ – 2019 ಕಾರ್ಯಕ್ರಮದ ಉದ್ಘಾಟನೆಯನ್ನು ಭ್ರಹ್ಮಶ್ರೀ ವೇ|| ಮೂ|| ನಂದ ಕುಮಾರ್ ತಂತ್ರಿ ಕೊಯ್ಯೂರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ, ಮಾತನಾಡುತ್ತಾ ಪ್ರತಿಯೊಬ್ಬ ವ್ಯಕ್ತಿಗೂ ವೈದಿಕ,ಧಾರ್ಮಿಕ ಹಾಗೂ ಹಿಂದೂ ಧರ್ಮದ ಬಗ್ಗೆ ಧಾರ್ಮಿಕ ಪ್ರಜ್ಞೆ ಮತ್ತು ಆರೋಗ್ಯ ಪೂರ್ಣ ಚಿಂತನೆ ಗಳನ್ನು ಒಳಗೊಂಡಿರುವ ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಬಯಲಾಟ ಕಲೆಗಳಿಂದ ದೊರಕುವುದು. ಇಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಸಂಘಟಕರನ್ನು ಅಭಿನಂದನೆ ಸಲ್ಲಿಸಿದರು.ಕೊಯ್ಯೂರು ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರು ಕೆ.ಬಿ.ಜಯರಾಜ್ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೊಯ್ಯೂರು ದೇವಸ್ಥಾನದ ಪ್ರಧಾನ ಅರ್ಚಕರಾದ ಅಶೋಕ ಭಟ್,ಉಜಿರೆ ಶ್ರೀ. ಧ.ಮಂ.ಕಾಲೇಜು ಉಪನ್ಯಾಸಕ ದಿವಾ ಕೊಕ್ಕಡ,ಕೊಯ್ಯೂರು ಕೃ.ಪ.ಸ.ಸಂ.ನಿರ್ದೇಶಕ ರವೀಂದ್ರನಾಥ ಗೌಡ ಪೆರ್ಮುದೆ,”ಸುದ್ದಿ ಪತ್ರಿಕೆ”ವರದಿ ಪ್ರತಿ ನಿಧಿ ಕೆ.ಎನ್.ಗೌಡ. ಕಲಾಯಿತೋಟ್ಟು,ಹಿರಿಯ ಯಕ್ಷಗಾನ ಕಲಾವಿದ ಬರಮೇಲು ಹೊನ್ನಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾ ಹಾರೈಸಿದರು.ಯಕ್ಷಗಾನ ಅಭಿಮಾನಿಗಳು,ಭಜನಾ ಮಂಡಳಿ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಕು.ವೀಣಾ ಆಚಾರ್ಯ ಪ್ರಾರ್ಥನೆ ಮಾಡಿದ್ದರು.ನಾರಾಯಣ ಭಟ್ ಬಾಸಮ ಸ್ವಾಗತಿಸಿ,ಕೊಯ್ಯೂರು ಪಂಚ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘದ ಅಧ್ಯಕ್ಷರ ವಿಜಯ ಕುಮಾರ್ ಎಮ್.ಕಾರ್ಯಕ್ರಮ ನಿರೂಪಿಸಿ,ಕಾರ್ಯದರ್ಶಿ ಉಮೇಶ್ ಆಚಾರ್ಯ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.