ಸ್ವಸ್ತಿಕ್ ಪ್ರೊ ಕಬಡ್ಡಿ ಪಂದ್ಯಾಟ ಉದ್ಘಾಟನೆ

ಪುಂಜಾಲಕಟ್ಟೆ : ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ಗೆ 36ನೇ ವರ್ಷದ ಸಂಭ್ರಮದಲ್ಲಿ ಡಾ| ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ-ಸ್ವಸ್ತಿಕ್ ಪ್ರೊ ಕಬಡ್ಡಿ ಉತ್ಸವ ಇದರ 36ನೇ ವರ್ಷದ ಅಂಗವಾಗಿ ದ.ಕ ಅಮೆಚೂರು ಕಬಡ್ಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಅಂತರ್ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ ಮುಕ್ತ ಹಾಗೂ 60ಕೆ.ಜಿ ವಿಭಾಗದ ಮತ್ತು ಜಿಲ್ಲಾ ಮಟ್ಟದ ಹೈಸ್ಕೂಲ್, ಪಿಯುಸಿ ವಿಭಾಗದ ಬಾಲಕ-ಬಾಲಕಿಯರ ಪ್ರೊ ಕಬಡ್ಡಿ ಪಂದ್ಯಾಟದ ಕ್ರೀಡಾಂಗಣದಲ್ಲಿ ಎಪಿಜೆ ಅಬ್ದುಲ್ ಕಲಾಂ ಕ್ರೀಡಾ ಜ್ಯೋತಿ ಪ್ರಜ್ವಲನೆ ಕಾರ್ಯಕ್ರಮವು ಇಂದು (ನ.16)ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಕ್ಲಬ್‌ನ ಸ್ಥಾಪಕಧ್ಯಕ್ಷ ಎಂ ತುಂಗಪ್ಪ ಬಂಗೇರ ಮತ್ತು ಸುಂದರ್‌ರಾಜ್ ಹೆಗ್ಡೆ ಸಾರಥ್ಯದಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ, ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿ ಶುಭ ಹಾರೈಸಿದರು. ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್, ನಾಯ್ಕ್ ಯು ಕ್ರೀಡಾಂಗಣದ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಹೈಕೋರ್ಟ್ ಜಿಲ್ಲಾ ನ್ಯಾಯದೀಶರಾದ ದಿನೇಶ್ ಹೆಗ್ಡೆ ವಹಿಸಿದ್ದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಕ್ಷೇತ್ರಾಧ್ಯಕ್ಷ ದೇವದಾಸ್ ಶೆಟ್ಟಿ, ತಾ.ಪಂ ಸದಸ್ಯ ರಮೇಶ್ ಕುಡ್ಮೇರು, ಎಲ್. ಸಿ.ಆರ್ ಕಾಲೇಜಿನ ಪ್ರಾಂಶುಪಾಲ ಪ್ರವೀಣ್, ಸಿದ್ಧಕಟ್ಟೆ ಹರ್ಷಲಿ ಕಲ್ಯಾಣ ಮಂಟಪದ ಮಾಲಕ ಹರೀಶ್ ಪೂಜಾರಿ, ಕಕ್ಕೆಪದವು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಾಮೋದರ್ ನಾಯ್ಕ್, ಬಿ.ಸಿ ರೋಡು ಎಂ.ಕೆ ಟವರ್, ಮಾಲಕ ಎಂ.ಕೆ ಇಬ್ರಾಹಿಂ, ಶ್ರೀ.ಕ್ಷೇ.ಧ. ಯೋಜನಾಧಿಕಾರಿ ದಯಾನಂದ ಪಿ., ಕ್ಯೊಲ ಪ್ರೌಢ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ, ಪೊಳಲಿ ವಿಜಯ ಬ್ಯಾಂಕ್ ಮಡಂದೂರ್ ಸಂತೋಷ್ ಕುಮಾರ್ ಚೌಟ, ನೈನಾಡು ಪಿಂಟೊ ಬೇಕರಿ ಮಾಲಕರು ನೆಲ್ವಿಸ್ಟರ್ ಪಿಂಟೊ, ಪುಂಜಾಲಕಟ್ಟೆ ಉದ್ಯಮಿ ಗಣೇಶ್ ಮೂಲ್ಯ ಅನಿಲಡೆ, ಬಂಟ್ವಾಳ ತಾಲೂಕು ತು.ರ.ವೇ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ ಭಾಗವಹಿಸಿದ್ದರು.
ಪಂದ್ಯಾಟದ ಸಂಚಾಲಕ ರಾಜೇಶ್ ಪಿ.ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ ಪಿ., ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಪಂದ್ಯಾಟದ ಸಹ ಸಂಚಾಲಕ ಅಬ್ದುಲ್ ಹಮೀದ್ ಮಲೆ, ತಾಂತ್ರಿಕ ಸಮಿತಿ ಸಂಚಾಲಕ ಫ್ರಾನ್ಸಿಸ್ ವಿ.ವಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಮೊದಲು ಪುಂಜಾಲಕಟ್ಟೆ ಬಸವನ ಗುಡಿ ದೇವಸ್ಥಾನದಿಂದ ಕ್ರೀಡಾಜ್ಯೋತಿಯೊಂದಿಗೆ ಆರಂಭವಾದ ಆಕರ್ಷಕ ಮೆರವಣಿಗೆಯು ಬಂಗ್ಲೆ ಮೈದಾನದಲ್ಲಿ ಸಮಾಪ್ತಿಗೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.