ಮಡಂತ್ಯಾರು: ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆ ಸರ್ವರ ಸಹಕಾರದಿಂದ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾ ಬರುತ್ತಿದೆ ಗ್ರಾಮೀಣ ಪ್ರದೇಶದಲ್ಲಿ ಉನ್ನತ ಮಟ್ಟದ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ನಮ್ಮೀ ಸಂಸ್ಥೆ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಸಂಸ್ಥೆಯಾಗಿದೆ. ಸಂಸ್ಥೆಯೊಂದನ್ನು ಉಳಿಸುವುದು ಬೆಳೆಸುವುದು ಅಭಿವೃದ್ಧಿ ಮಾಡುವುದು ಹಳೆ ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ ಎಂದು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಫಾ| ಬೇಸಿಲ್ ವಾಸ್ ಇವರು ಹೇಳಿದರು. ಅವರು ಸೆಕ್ರೇಡ್ ಹಾರ್ಟ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸ್ನೇಹಕೂಟ ಹಾಗೂ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ವಂ|ಫಾ ಜೆರೋಮ್ ಡಿಸೋಜ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಮೆಲ್ವಿನ್ ಕೊರೆಯ ಹಾಗೂ ನೂತನ ಅಧ್ಯಕ್ಷ ಮ್ಯಾಕ್ಸಿಂ ಅಲ್ಬುಕರ್ಕ್ ಕೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವಂ| ಬೇಸಿಲ್ ವಾಸ್ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ವಂ| ಬೇಸಿಲ್ ವಾಸ್ ಗೌರವ ಸಲಹೆಗಾರರಾಗಿ, ಗೌರವಾಧ್ಯಕ್ಷರಾಗಿ ವಂ|ಫಾ| ಜೆರೋಮ್ ಡಿ ಸೋಜಾ ಅಧ್ಯಕ್ಷರಾಗಿ ಮ್ಯಾಕ್ಸಿಮ್ ಆಲ್ಬಕರ್ಕ್ ಕೆ, ಉಪಾಧ್ಯಕ್ಷರಾಗಿ ಪದ್ಮನಾಭ ಸುವರ್ಣ, ಕಾರ್ಯದರ್ಶಿ ಜುಲಿಯಾನ ಅಂದ್ರಾದೆ, ಜೊತೆ ಕಾರ್ಯದರ್ಶಿ ಶರಲ್ ನರೋನ್ಹಾ ,ಕೋಶಾಧಿಕಾರಿ ವಿವೇಕ್ ವಿನ್ಸೆಂಟ್ ಪಾಯಿಸ್, ಆಂತರಿಕ ಲೆಕ್ಕಪರಿಶೋಧಕ ಒಲಿಂಡಾ ಗೊನ್ಸಾಲ್ವಿಸ್, ಬಾಹ್ಯ ಲೆಕ್ಕ ಪರಿಶೋಧಕ ಗಾಯತ್ರಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಂ| ಫಾ| ಬೇಸಿಲ್ ವಾಸ್, ವಂ|ಫಾ| ಜೆರೋಮ್ ಡಿಸೋಜ, ಮ್ಯಾಕ್ಸಿಂ ಆಲ್ಬುಕರ್ಕ್ ಕೆ, ರೆ| ಫಾ| ಲ್ಯಾ ಲೂವಿಸ್, ರೊನಾಲ್ಡ್ ಸಿಕ್ವೇರಾ ,ಅರುಣ್ ಫುರ್ಟಾಡೊ, ಮೆಲ್ವಿನ್ ಕೊರೆಯ, ಪದ್ಮನಾಭ ಸುವರ್ಣ, ಜುಲಿಯಾನ ಅಂದ್ರಾದೆ ,ಮಹಮದ್ ಹುಸೇನ್, ವಿವೇಕ್ ವಿನ್ಸೆಂಟ್ ಪಾಯಿಸ್, ಬ್ಲೇನಿ ಸಿ ಡಿಸೋಜಾ, ಆದಿತ್ಯ ಎಸ್ ರಾವ್, ಜೇಮ್ಸ್ ಪ್ರಕಾಶ್ ರೊಡ್ರಿಗಸ್, ಶರಲ್ ನರೋನ್ಹಾ ,ಪ್ರಮೀಳಾ, ಆಲ್ಬರ್ಟ್ ಮೋರಸ್ ಆಯ್ಕೆಯಾದರು.
ಕೋಶಾಧಿಕಾರಿ ವಿವೇಕ್ ವಿನ್ಸೆಂಟ್ ಪಾಯಿಸ್ ವಂದಿಸಿ, ಕನ್ನಡ ಉಪನ್ಯಾಸಕ ವಸಂತ್ ಶೆಟ್ಟಿ ನಿರೂಪಿಸಿದರು.