ಶ್ರೀ. ಧ.ಮಂ.ಪ್ರೌಢಶಾಲೆಯಲ್ಲಿ ಸುವರ್ಣ ನೆನಪು ಕಾರ್ಯಕ್ರಮ

ಧರ್ಮಸ್ಥಳ: ಶ್ರೀ ಧರ್ಮಸ್ಥಳದ ಮಂಜುನಾಥೇಶ್ವರ ಪ್ರೌಢಶಾಲೆಯ 1968, 1969ನೇ ಎಸ್ಸೆಸ್ಸೆಲ್ಸಿ ಪ್ರಥಮ ತಂಡದ  ವಿದ್ಯಾರ್ಥಿಗಳ  ಸುವರ್ಣ ನೆನಪು ಕಾರ್ಯಕ್ರಮ ಹಾಗೂ ಅಂದಿನ ಶಿಕ್ಷಣ ನೀಡಿದ ಶಿಕ್ಷಕರಿಗೆ ಅಭಿವಂದನೆ ಕಾರ್ಯಕ್ರಮವು ಇಂದು (ನ.12)ರಂದು ಜರುಗಿತು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ। ಡಿ ವೀರೇಂದ್ರ ಹೆಗ್ಡೆ, ಶ್ರೀ ಧ.ಮಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಯಶೋವರ್ಮ, ಉದ್ಯಮಿ ಶ್ರೀಪತಿ ಭಟ್ ಮೂಡಬಿದ್ರೆ, ಮುಖ್ಯ ಶಿಕ್ಷಕ ಜನಾರ್ದನ ತೋಳ್ಪಾಡಿತ್ತಾಯ, ಪ್ರೌಢಶಾಲಾ ಸಂಚಾಲಕ ಅನಂತ ಪದ್ಮನಾಭ ಭಟ್  ಹಾಗೂ ಪ್ರಥಮ ಸಾಲಿನ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಥಮ ಬ್ಯಾಚ್ 6 ಮಂದಿ ಶಿಕ್ಷಕರುಗಳಾದ ರಾಮಕೃಷ್ಣ ಉಡುಪ, ರಘುರಾಮ ಗಾಂಭೀರ , ರಘುನಾಥ ರೈ , ಎಸ್ ಬಿ ನರೇಂದ್ರ ಕುಮಾರ್, ಅರುಂಧತಿ, ಲೀಲಾ ರುಕ್ಮಿಣಿ ಇವರುಗಳಿಗೆ ಗುರುವಂದನೆ ಸಲ್ಲಿಸಲಾಯಿತು ಹಾಗೂ ಶಾಲಾ ಜವಾನರಾದ ಸುಂದರ ಮತ್ತು ರಾಮೇಗೌಡರನ್ನು ವೇದಿಕೆಯಲ್ಲಿ ಗಣ್ಯರ ಸಮ್ಮುಖ  ಸನ್ಮಾನಿಸಿ ಗೌರವಿಸಲಾಯಿತು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.