ಪದ್ಮುಂಜ: ಇಲ್ಲಿಯ ಮುಖ್ಯ ಶಿಕ್ಷಕ ಮಂಜುನಾಥ ರವರನ್ನು ಸುಳ್ಳು ಆರೋಪದ ಮೇಲೆ ನ. 10ರಂದು ಬಂದಿಸಲಾಗಿತ್ತು.
ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕೇವಲ ಎರಡು ತಿಂಗಳು ಮಾತ್ರ ಅತಿಥಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ವಂದನಾ ಮುಖ್ಯ ಶಿಕ್ಷಕ ಮಂಜುನಾಥ ರವರು ಎ.14 ಶಾಲೆಯಲ್ಲಿ ನನ್ನ ಮೇಲೆ ಅತ್ಯಾಚಾರ ವೆಸಗಿದ್ದಾರೆ ಎಂದು ಪೋಲೀಸರಿಗೆ ದೂರು ನೀಡಿದ್ದು, ದೂರಿನಂತೆ ಉಪ್ಪಿನಂಗಡಿ ಪೋಲೀಸರು ನ.10 ರಂದು ಮಂಜುನಾಥರನ್ನು ಬಂದಿಸಿದ್ದರು. ಆದರೆ 2019ಎಪ್ರಿಲ್ 14ರಂದು ದೂರುದಾರರಾದ ವಂದನಾ ರವರು ಶಾಲೆಗೆ ಬರಲೇ ಇಲ್ಲ ಎಂದು ವಿಧ್ಯಾರ್ಥಿಗಳು ಹಾಗು ಊರವರು ಅಧ್ಯಾಪಕರು ಮಾಧ್ಯಮ ಮುಂದೆ ಹೇಳಿಕೂಂಡರು ಹಾಗೂ ಮೇಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಹಿರಿಯ ಅಧ್ಯಾಪಕಿ ಗಿರಿಜರವರು ಮಾತನಾಡಿ ಶಿಕ್ಷಣ ಇಲಾಖೆಯಲ್ಲಿ 9 ವರ್ಷದ ಅನುಭವ ಹೊಂದಿದ್ದು, ಅವರ ಒಳ್ಳೆಯ ಗುಣ ನಡತೆಯ ಬಗ್ಗೆ ವಿವರಿಸಿದರು. ಬೆಳ್ತಂಗಡಿ ಶಿಕ್ಷಣಾಧಿಕಾರಿಂ ಶತೀಶ್ ಪಿ.ಯವರು ಮಾತನಾಡಿ ಇಲಾಖಾ ವತಿಯಿಂದಲೂ ಸತ್ಯಾ ಸತ್ಯತೆಯ ಬಗ್ಗೆ ತನಿಖೆ ನಡೆಸಿ ನೂಂದ ಅಧ್ಯಾಪಕ ಮಂಜುನಾಥ ರವರಿಗೆ ನ್ಯಾಯ ದೂರಕಿಸಲು ಪ್ರಯತ್ನಿಲಾಗುವುದು ಎಂದರು.
ವಿಧ್ಯಾರ್ಥಿ ನಾಯಕ ಪುನೀತ್ ಹಾಗೂ ಯಕ್ಷಿತ್, ಅಂಕಿತ್, ಮಾತನಾಡಿ ವಂದನಾ ಟೀಚರ್ ರವರು ಆ ದಿನ ಅಂದರೆ ಎ.14 ರಂದು ಶಾಲೆಗೇ ಬರಲಿಲ್ಲ ಎಂದು ಸ್ಪಷ್ಟ ಪಡಿಸಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷ ಯುವರಾಜ ಇಂದ್ರ, ಉಪಾಧ್ಯಕ್ಷರಾದ ಗೀತ ಸದಸ್ಯರುಗಲಾದ ಸೀತಾರಾಮ ಮಡಿವಾಳ ಕಾಸಿಂ ಪದ್ಮುಂಜ ಹಾಗೂ ಪೋಷಕರು ವಿಧ್ಯಾರ್ಥಿಗಳು ಮಾತನಾಡಿ ಬಂಧನವಾದ ಮಖ್ಯೋಪಾಧ್ಯಾಯರು ಒಳ್ಳೆಯ ಉತ್ತಮ ಗುಣನಡತೆಯ ಅಧ್ಯಾಪಕರಾಗಿದ್ದು ಅವರ ಮೇಲೆ ಹೋರಿಸಿದ ಆರೋಪವು ಸಂಪೂರ್ಣ ಸುಳ್ಳು ಎಂದು ಆರೋಪಿಸಿದರು. ಮಾತ್ರವಲ್ಲದೆ ಸುಳ್ಳು ಆರೋಪ ಮಾಡಿದ ವಂದನಾರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪಂಚಾಯತ್ ಸದಸ್ಯರಾದ ನರಸಿಂಹ ಶೆಟ್ಟಿ, ಮಾತನಾಡಿ ಬೆಂಬಲ ಸೂಚಿಸಿರು. ಪಂ ಅಧ್ಯಕ್ಷರಾದ ಸುನಿಲ್ ಸಾಲಿಯಾನ್ ಮಾತನಾಡಿ ಒಬ್ಬ ನಿಷ್ಟಾವಂತ ಅಧ್ಯಾಪಕ ಮೇಲೆ ಸುಳ್ಳು ಆರೋಪ ಹೂರಿಸಿ ಬಂದಿಸಿರುವುದು ಖಂಡನೀಯವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿಕೂಡಬೇಕೆಂದು ಒತ್ತಾಯಿಸಿದರು.
ಶಿಕ್ಷಣಾಧಿಕಾರಿ ಸತೀಶ್ ಪಿ. ಯಾದವ ಭುವನೇಶ್, ರಮೇಶ್, ಸಿ.ಆರ್.ಪಿ .ಸಂದ್ಯಾ ಸಮನ್ವಯ ಅಧಿಕಾರಿ ಗಣೇಶ್ ಐತಾಲ್, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪೋಷಕರೊಂದಿಗೆ ಮಾತನಾಡಿ, ಬಂದನಕ್ಕೂಳಗಾದ ಮಂಜುನಾಥ ನಿರಪರಾಧಿಯಾದರೆ ಖಂಡಿತಾ ಸೂಕ್ತ ನ್ಯಾಯ ದೊರಕಿಸಿಕೂಡುವುದಾಗಿ ಭರವಸೆ ನೀಡಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಕೇಳಿಕೂಂಡಮೇರೆಗೆ ಪೋಷಕರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.