ಹಿಮಾಯ ಯೂತ್ ಫ್ರೆಂಡ್ಸ್ ಬದ್ಯಾರ್ ವತಿಯಿಂದ ವಿಶಿಷ್ಟ ರೀತಿಯಲ್ಲಿ ಪ್ರವಾದಿ ಜನ್ಮ ದಿನಾಚರಣೆ

ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾನವೀಯತೆಯ ಸಂದೇಶವನ್ನು ನೀಡಿದ ಊರಿನ ಯುವಕರ ತಂಡ

ಬೆಳ್ತಂಗಡಿ: ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ರ ಪ್ರಸಕ್ತ ಸಾಲಿನ ಜನ್ಮ ದಿನ ಆಚರಣೆಯನ್ನು ಜಗತ್ತಿನೆಲ್ಲೆಡೆ ಸಂತೋಷ, ಸಂಭ್ರಮದಿಂದ ಹಲವು ಕಾರ್ಯಕ್ರಮಗಳೊಂದಿಗೆ ಅನುಯಾಯಿಗಳು ಆಚರಿಸುವಾಗ ವಿಶೇಷವಾಗಿ ಹಿಮಾಯ ಯೂತ್ ಟೀಮ್ ಬದ್ಯಾರ್ ಯುವಕರ ತಂಡವು ಜಗತ್ತಿಗೆ ಮಾನವೀಯತೆಯ ಸಂದೇಶವನ್ನು ಸಾರಿದ ಪ್ರವಾದಿವರ್ಯರ ಆದರ್ಶಗಳನ್ನು ಪಾಲಿಸುತ್ತಾ, ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಬದ್ಯಾರ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ತಂಪು ಪಾನೀಯಗಳನ್ನು  ಹಣ್ಣು ಹಂಪಲುಗಳನ್ನು ನೀಡಿ ಸಾಂತ್ವನ ನೀಡಿದರು.

ಇದೇ ವೇಳೆ ಮೀಲಾದ್ ಶುಭಾಶಯವನ್ನು ಹೇಳುತ್ತಾ ಮಾತನಾಡಿದ ಬದ್ಯಾರ್ ಜಮಾ’ಅತ್ ಖತೀಬರಾದ ಅನ್ಸಾರ್ ಸಖಾಫಿ ಉಸ್ತಾದ್ “ಇಸ್ಲಾಂ ಶಾಂತಿಯ ಸೌಹಾರ್ದತೆಯ ಧರ್ಮವಾಗಿದ್ದು ಪ್ರವಾದಿವರ್ಯರ ಮಾತು, ಕ್ರತಿ ಹಾಗೂ ಸರ್ವಧರ್ಮ ಸಹಿಷ್ಣುತೆಯೇ ಇಂತಹ ರೋಗಿಗಳ, ಬಡವರ ಸೇವೆ ಮಾಡಲು ಪ್ರೇರಣೆ” ಎಂದು ವಿಶ್ಲೇಷಿಸಿದಾಗ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ನೆರೆದ ಪ್ರೇಕ್ಷಕರು ಚಪ್ಪಾಳೆ ತಟ್ಟುವ ಮೂಲಕ ತಂಡವನ್ನು ಶ್ಲಾಘಿಸಿದರು.

ಬದ್ಯಾರ್ ಜುಮಾ ಮಸೀದಿ ಬದ್ಯಾರ್ ಜಮಾ’ಅತ್ ವತಿಯಿಂದ ಆಚರಿಸಿದ ಪ್ರಸಕ್ತ ಸಾಲಿನ ಈದ್ ಮೀಲಾದ್ ಕಾರ್ಯಕ್ರಮವು ಮೌಲಿದ್ ಮಜ್ಲಿಸ್ , ಮದರಸ ವಿದ್ಯಾರ್ಥಿಗಳ ಸ್ಪರ್ಧಾ ಕಾರ್ಯಕ್ರಮ, ದಫ್ ಹಾಗೂ ಆಕರ್ಷಕ ಮೆರವಣಿಗೆ, ಸಭಾ ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದ್ದು, ಕಾರ್ಯಕ್ರಮಕ್ಕಾಗಿ ಸಹಕರಿಸಿದ ಊರಿನ ಯುವಕರ ಸಂಘಟನೆಯಾದ ಫೋರ್ಚೂನ್ ಕಸಿನ್ಸ್ ಪಿ.ಕೆರೆ ಹಾಗೂ ಜಮಾಅತ್ ನ ಎಲ್ಲಾ ರೀತಿಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಝಮ್ ಝಮ್ ವಾಟ್ಸಾಪ್ ಗ್ರೂಪ್ ಸದಸ್ಯರಿಗೆ ಹಾಗೂ ಊರಿನ ಇತರ ಸಾಧಕರಿಗೆ ಟೀಮ್ ಹಿಮಾಯಾ ವತಿಯಿಂದ ಪ್ರತ್ಯೇಕ ಅಭಿನಂದನಾ ಫಲಕವನ್ನು ನೀಡಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.