ಬಾಲಕಿ ಮಾನಭಂಗಕ್ಕೆ ಯತ್ನಿಸಿದ ಆರೋಪಿ ಅಮೃತ್ ಗೆ ನ್ಯಾಯಾಂಗ ಬಂಧನ


ಬೆಳ್ತಂಗಡಿ: ಇಲ್ಲಿಯ ರೆಖ್ಯಾ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಆರೋಪದ ಮೇಲೆ ಅಮೃತ್(26ವ) ಎಂಬುವರ ಮೇಲೆ ಧರ್ಮಸ್ಥಳ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಆ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದುಕೊಂಡಿರುವ ಧರ್ಮಸ್ಥಳ ಠಾಣಾ ಎಸ್.ಐ ಅವಿನಾಶ್ ಗೌಡ ಅವರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಗುಡ್ಡಕ್ಕೆ ಕರೆದುಕೊಂಡುಹೋಗಿ ಮಾನಭಂಗ:
ಆರೋಪಿ ಅಮೃತ್ ರೆಖ್ಯಾ ಗ್ರಾಮದ ಬಾಲಕಿಯನ್ನು ಪುಸಲಾಯಿಸಿ ಆಕೆಯ ಮನೆ ಸಮೀಪದ ಗುಡ್ಡಕ್ಕೆ ಕರೆದುಕೊಂಡು ಹೋಗಿ ಮಾನಭಂಗಕ್ಕೆ ಯತ್ನಿಸಿರುವುದಾಗಿ ಬಾಲಕಿಯ ಹೆತ್ತವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಈ ಪತ್ತೆ ಕಾರ್ಯ‍್ ನಡೆದಿದೆ.
ನ್ಯಾಯಾಲಯ  ಆರೋಪಿಗೆ ಮುಂದಿನ 15 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದ ಪರಿಣಾಮ ಾರೋಪಿ ಈಗ ಮಂಗಳೂರು ಸಬ್ದೆ‍ಜೈಲ್‍ನಲ್ಲಿ ಕಂಬಿ ಎಣಿಸುವಂತಾಗಿದೆ. 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.