ಹತ್ಯಡ್ಕದಲ್ಲಿ ಅಕ್ರಮ ಗಣಿಗಾರಿಕೆ: ಕಂದಾಯ ಇಲಾಖಾಧಿಕಾರಿಗಳ ದಾಳಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅರಸಿನಮಕ್ಕಿ : ಕಾನೂನುಬಾಹಿರವಾಗಿ, ಪರವಾನಿಗೆ ಇಲ್ಲದೆ ಗಣಿಗಾರಿಕೆಯನ್ನು ನಡೆಸುತ್ತಿದ್ದ ಜಾಗವೊಂದಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಸೊತ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಹತ್ಯಡ್ಕ ಗ್ರಾಮದ ನೆಕ್ಕಿಲು ಎಂಬಲ್ಲಿ ನಡೆದಿದೆ.
ಇಲ್ಲಿನ ಸರ್ವೆ ನಂಬ್ರ 127/2 ಮತ್ತು 127 /3ರ ಖಾಸಗಿ ವ್ಯಕ್ತಿಯೊಬ್ಬರ ಸ್ವಾಧೀನದಲ್ಲಿರುವ ಜಾಗದ ಒಂದು ಪಾರ್ಶ್ವದಲ್ಲಿ ಸುಮಾರು 15 ಸೆಂಟ್ಸ್ ಜಾಗದಲ್ಲಿ ಹಿಟಾಚಿ ಮತ್ತು ಕಂಪ್ರೆಸರ್ ಟ್ರ್ಯಾಕ್ಟರ್‌ಗಳನ್ನು ಬಳಸಿ ಕಳೆದೊಂದು ವಾರದಿಂದ ನಿರಂತರವಾಗಿ ಸ್ಫೋಟಕಗಳನ್ನು ಬಳಸಿ ಗಣಿಗಾರಿಕೆಯನ್ನು ನಡೆಸಲಾಗುತ್ತಿತ್ತು.

ಈ ಬಗ್ಗೆ ಜಿಲ್ಲಾಧಿಕಾರಿ, ಗಣಿ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್‌ರವರ ಸೂಚನೆ ಮೇರೆಗೆ ನ.7 ರಂದು ಬೆಳಿಗ್ಗೆ ಗ್ರಾಮಕರಣಿ ಪರಮೇಶ್ ಟಿ., ಅರಸಿನಮಕ್ಕಿಯ ಗ್ರಾಮಕರಣಿಕರಾದ ಕಾವ್ಯಶ್ರೀ ಮತ್ತು ಗ್ರಾಮ ಸಹಾಯಕ ಸುಂದರರವರು ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಗಣಿಗಾರಿಕೆಯನ್ನು ನಡೆಸುತ್ತಿರುವದನ್ನು ಪತ್ತೆಹಚ್ಚಿದ್ದರು. ಇದನ್ನು ಗಮನಿಸಿದ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೆಲಸವನ್ನು ಮುಂದುವರಿಸದೆ, ತಕ್ಷಣ ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿದ್ದಾರೆ.

ಕೋರೆ ಕೆಲಸಕ್ಕೆ ಬಳಸಿದ ರಾಡ್‌ಗಳು, ಪೈಪ್‌ಗಳು ಹಾಗೂ ಕಂಪ್ರೆಸರ್ ಟ್ರ್ಯಾಕ್ಟರ್‌ನ ಕೀಯನ್ನು ಅಧಿಕಾರಿಗಳು ವಶಪಡಿಸಿಕೊಂಡು, ಸ್ಥಳದ ಮಹಜರು ನಡೆಸಿ, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಮುಂದಿನ ತನಿಖೆಯನ್ನು ಗಣಿ ಮತ್ತು ಭೂಗರ್ಭ ವಿಜ್ಞಾನ ಇಲಾಖೆ ನಡೆಸಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.