ಮುಂಡಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್ಟ್ ಅವರ ತಂದೆ, ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಮಚ್ಚಿಮಲೆ ನಡುಸಾರು ವಿರೂಪಾಕ್ಷ ಭಟ್ಟ್ (81.ವ) ಅವರು ಹೃದಯಘಾತದಿಂದ ನ. 6 ರಂದು ಪುತ್ತೂರಿನ ಮಚ್ಚಿಮಲೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಎಂದಿನಂತೆ ಆರೋಗ್ಯಪೂರ್ಣರಾಗಿದ್ದ ಅವರು ಇಂದು ಬೆಳಿಗ್ಗೆ ದೈನಂದಿನ ಕ್ರಿಯೆಗಳನ್ನು ನೆರವೇರಿಸಿ ಮನೆಯೊಳಗೆ ಬಂದು ಕುರ್ಚಿಯಲ್ಲಿ ಕುಳಿತುಕೊಂಡವರು ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದರು. ಪ್ರಗತಿಪರ ಕೃಷಿಕರಾಗಿದ್ದ ಅವರು ಸರಳ ಸಜ್ಜನ ಸಾಂತ್ವಿಕ ಗುಣ ಸ್ವಭಾವಗಳೊಂದಿಗೆ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಮೃತರು ಪತ್ನಿ ಗೌರಿ ಅಮ್ಮ, ಪುತ್ರರಾದ ಶಂಭು ಭಟ್ಟ್, ರಾಮ ಭಟ್ಟ್ ಮತ್ತು ಅನಂತ ಭಟ್ಟ್, ಪುತ್ರಿ, ಮೂಡುಶೆಡ್ಡೆ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿರುವ ಡಾ. ರುಕ್ಮಿಣಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ವಿಧಿಗಳು ಮಧ್ಯಾಹ್ನ ಪುತ್ತೂರು ಮಚ್ಚಿಮಲೆ ಮನೆಯಲ್ಲಿ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು, ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ, ವಿಶ್ವೇಶ್ವರ ಭಟ್, ಅಡೂರು ಗೋಪಾಲಕೃಷ್ಣ ರಾವ್ಮ, ಯಂಗ್ ಚಾಲೆಂಜರ್ಸ್ ಸಂಸ್ಥಾಪಕ ನಾಮದೇವ ರಾವ್ ಮುಂಡಾಜೆ,ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ ಭಿಡೆ, ಸಿಇಒ ರಾಜು ಶೆಟ್ಟಿ ಬೆಂಗೆತ್ಯಾರು, ಹಿತ್ತಿಲಕೋಡಿ ಹರಿಪ್ರಸಾದ್ ಭಟ್,ಮುರಳಿಕೃಷ್ಣ ಹಸಂತಡ್ಕ, ಸಹಿತ ಅನೇಕ ಗಣ್ಯಮಹನೀಯರು ಭಾಗಿಯಾಗಿ ಅಂತಿಮ ದರ್ಶನ ಪಡೆದು ಮನೆಯವರಿಗೆ ಸಾಂತ್ವನ ಹೇಳಿದರು.