ಇಳಂತಿಲ: ಬೃಹತ್ ಗಾತ್ರದ ಸಾಗುವಾನಿ ಮರ ಕಳವು

Advt_NewsUnder_1
Advt_NewsUnder_1

ಇಳಂತಿಲ: ಇಲ್ಲಿಯ  ಜೋಗಿಬೆಟ್ಟು ಎಂಬಲ್ಲಿ, ಪಟ್ಟಾ ಸ್ಥಳದಲ್ಲಿ ತೋಟದ ಬಳಿ ಇದ್ದ ಬೃಹತ್ ಗಾತ್ರದ ಸಾಗುವಾನಿ ಮರವೊಂದು ಕಳವಾಗಿರುವ ಬಗ್ಗೆ  ಜೋಗಿಬೆಟ್ಟು ನಿವಾಸಿ ಜಿ. ಮಹಮ್ಮದ್ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇಳಂತಿಲ ಗ್ರಾಮದ ಸರ್ವೆ ನಂಬ್ರ 208/3ರಲ್ಲಿ ತೋಟದ ಹತ್ತಿರ ಇದ್ದ ಸಾಗುವಾನಿ ಮರವನ್ನು ರಾತ್ರಿ ಹೊತ್ತಿನಲ್ಲಿ ಯಾರೋ ಕದ್ದು ಸಾಗಿಸಿರುವ ಕುರುಹು ಕಂಡು ಬಂದಿದ್ದು,
ಮರವನ್ನು ಸ್ಥಳೀಯವಾಗಿ ಇರುವ ಮರಗಳ್ಳನೋರ್ವ ಕಳವುಗೈದಿರುವ ಬಗ್ಗೆ ಸಂಶಯವಿದ್ದು, ಆರೋಪಿಯನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಮಸೀದಿಗೆ ಒಪ್ಪಿಸಲಿದ್ದ ಮರ:
ಮರ ಕಳವು ಆಗಿರುವ ದೂರುದಾರ ಮಹಮ್ಮದ್ ಮರದ ತುಂಡೊಂದನ್ನು ಮಸೀದಿಗೆ ನೀಡುವ ಬಗ್ಗೆ ಹರಕೆಹೊತ್ತಿದ್ದು, ಇದನ್ನು ಅರಿತ ಮರ ಕಳವುಗೈದಿರುವ ಆರೋಪಿ ಕಡವಿನಬಾಗಿಲು ನಿವಾಸಿ ಸಿಹಾಬ್ ರವರು ದೂರದಾರರ ಮನೆಗೆ ಬಂದು ಮರ ಸಾಗಾಟ ಮಾಡಿರುವ ಬಗ್ಗೆ ತಪ್ಪು ಒಪ್ಪಿಕೊಂಡಿದ್ದೆನ್ನಲಾಗಿದೆ. ಈ ಸಂದರ್ಭದಲ್ಲಿ  ದೂರುದಾರ ಜಿ. ಮಹಮ್ಮದ್ ರವರು ಈಗಾಗಲೇ ತಾನು ಪೊಲೀಸರಿಗೆ ದೂರು ನೀಡಿದ್ದು, ಆದ ಕಾರಣ ಪೊಲೀಸ್ ಠಾಣೆ ಮೂಲಕವೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿ ಕಳುಹಿಸಿದ್ದರು.
ಆರೋಪಿ ಪೊಲೀಸರಿಗೆ ಶರಣು, ಬಿಡುಗಡೆ?
ಮಸೀದಿಗೆ ಹರಕೆ ಹೇಳಿರುವ ಕಾರಣಕ್ಕೆ ಹೆದರಿದ್ದ ಆರೋಪಿ ಕಡವಿನಬಾಗಿಲು ನಿವಾಸಿ ಸಿಹಾಬ್ ಎಂಬವರು ಪೊಲೀಸ್ ಠಾಣೆಗೆ ತೆರಳಿ ಮರ ಕಳವು ಬಗ್ಗೆ ತಿಳಿಸಿ, ಇದರಲ್ಲಿ ಇನ್ನೂ ಇಬ್ಬರ ಕೈವಾಡವಿರುವ ಬಗ್ಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಆದರೆ ತದ ನಂತರದ ಬೆಳವಣಿಗೆಯಲ್ಲಿ ಪೊಲೀಸರು ಆರೋಪಿಯೊಂದಿಗೆ ಕೈಜೋಡಿಸಿಕೊಂಡು ಕಳವು ಪ್ರಕರಣನ್ನು ಮುಚ್ಚಿ ಹಾಕಿದ್ದಾರೆ ಎಂದು ಆಪಾದಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.