ಬೆಳ್ತಂಗಡಿ ಸ್ವಚ್ಛ ಪಟ್ಟಣ ಅಭಿಯಾನ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ:  ಪಟ್ಟಣ ಅಭಿಯಾನ ಕಾರ್ಯಕ್ರಮದನ್ವಯ ಪ್ರತೀ ಗುರುವಾರ ಬೆಳಿಗ್ಗೆ ನಗರದಲ್ಲಿರುವ ಪ್ರತೀ ವಾಡ್೯ಮಟ್ಟದ ಸ್ವಚ್ಛತಾ ಸಮಿತಿಯ ಸಹಕಾರದಲ್ಲಿ ಮುಂದಿನ ಒಂದು ವರ್ಷದಲ್ಲಿ ಸ್ವಚ್ಛ ತಾ ಅಭಿಯಾನ ವನ್ನು ನಡೆಸಲಾಗುತ್ತಿದೆ.

ಇಂದು (ಅ.31)ರಂದು  ಕಾರ್ಯಕ್ರಮದ ಚಾಲನೆಯನ್ನು 5ನೇ ವಾಡಿ೯ನಿಂದ ನೀಡಲಾಯಿತು. ವಾರ್ಡ್ ಸದಸ್ಯ ಜನಾರ್ದನ ಕುಲಾಲ್, ಮುಖ್ಯಾಧಿಕಾರಿ ಸುಧಾಕರ್, ಇಂಜಿನಿಯರ್ ಮಹಾವೀರ ಆರಿಗ, ಗುತ್ತಿಗೆದಾರರು ದಯಾನಂದ, ನಿವೃತ್ತ ಅಧಿಕಾರಿ ಪದ್ಮಕುಮಾರ್, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಪಟ್ಟಣ ಪಂಚಾಯತ್ ಸಿಬ್ಬಂದಿ ಗಳು, ಕಮ್ಯುನಿಸ್ಟ್ ಪಕ್ಷದ ನಾಯಕ ಬಿ.ಎಂ.ಭಟ್, ಸಮುದಾಯ ವ್ಯವಹಾರ ಅಧಿಕಾರಿ ವೆಂಕಟರಮಣ ಶರ್ಮ, ಸ್ವಚ್ಛ ತಾ ಸೇನಾನಿ ಜಯರಾಮ ಆಚಾರ್ಯ, ಹಾಗೂ ಸ್ಥಳೀಯ ನಿವಾಸಿಗಳು ಸ್ವಚ್ಛತಾ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.


ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ ಮೂಲದಲ್ಲಿ ಕಸ ವಿಲೇವಾರಿ ಮತ್ತು ಗೊಬ್ಬರ ತಯಾರಿಕೆಗೆ ಬೇಕಾದ ಮಾಹಿತಿಯನ್ನು ನೀಡಿದರು. ಪದ್ಮಕುಮಾರ್ ಸ್ಥಳೀಯರ ಪರವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ಗುರುವಾರ 7ನೇ ವಾಡಿ೯ನ ಕುತ್ಯಾರು ಪರಿಸರದಲ್ಲಿ ಕಾಯ೯ಕ್ರಮ ನಡೆಯಲಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.