ಸರ್ಕಾರದ ಆದೇಶಕ್ಕೆ ಬ್ರೇಕ್ ನೀಡಿದ ಹೈಕೋರ್ಟ್ ಕೊಕ್ಕಡ ಪಂಚಾಯತ್ ಅಧ್ಯಕ್ಷರ ಅಮಾನತು ಆದೇಶ ರದ್ದು

Advt_NewsUnder_1
Advt_NewsUnder_1
Advt_NewsUnder_1
  • ಕೊಕ್ಕಡ: ಕಳೆದ ಕೆಲವು ತಿಂಗಳ ಹಿಂದೆ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಜೆ ಸೆಬಾಸ್ಟಿಯನ್ ಅವರ ಸದಸ್ಯತ್ವ ಸಹಿತ ಅಧಕ್ಷ ಸ್ಥಾನವನ್ನು ರದ್ದುಪಡಿಸಿ ಸರ್ಕಾರ ನೀಡಿದ್ದ ಆದೇಶವನ್ನು ಹೈಕೋರ್ಟ್ ತಳ್ಳಿಹಾಕಿದೆ. ಆ ಹಿನ್ನೆಲೆಯಲ್ಲಿ ಸೆಬಾಸ್ಟಿಯನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದ್ದು, ಅವರು ಮುಂದಕ್ಕೆ ಈ ಹಿಂದೆ ಇದ್ದ ಗ್ರಾ.ಪಂ. ಸದಸ್ಯತ್ವ ಮತ್ತು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆಯೂ ರಾಜ್ಯ ಉಚ್ಛ ನ್ಯಾಯಾಲಯ ಆದೇಶ ನೀಡಿದೆ. ಪ್ರಜಾಸತ್ತಾತ್ಮಕ ನೆಲೆಯಲ್ಲಿ ತಾನು ಹೊಂದಿದ್ದ ಜನಪ್ರತಿನಿಧಿತ್ವವನ್ನು ರದ್ದುಪಡಿಸಿ ಸರಕಾರ ನೀಡಿದ ರದ್ದತಿ ಆದೇಶದ ವಿರುದ್ಧ ಸೆಬಾಸ್ಟಿಯನ್ ಅವರು ಹಲವು ತಿಂಗಳುಗಳ ಕಾಲ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿ, ಈಗ ಅದರಲ್ಲಿ ಯಶಕಂಡಿದ್ದಾರೆ. ಆದೇಶದಲ್ಲಿ, ಇದೊಂದು ಸುಳ್ಳು ಪ್ರಕರಣವೆಂದು ಹೈಕೋರ್ಟ್ ಕಂಡುಕೊಂಡಿದ್ದು, ಯಾವ ರಾಜಕೀಯ ಉದ್ದೇಶದಿಂದ ಪ್ರಕರಣ ದಾಖಲಾಗಿದೆ ಎಂಬುದಾಗಿ ಪರಾಮರ್ಷಿಸಿ, ತನಿಖೆಯನ್ನು ಚುರುಕುಗೊಳಿಸಿ, ಕಡತವನ್ನು ಮುಕ್ತಾಯಗೊಳಿಸುವಂತೆಯೂ ಲೋಕಾಯುಕ್ತ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.