ನ.3: ಗಾಣಿಗ ಸಮುದಾಯ ಭವನ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗಾಣಿಗರ ಯಾನೆ ಸಫಲಿಗರ ಸಂಘದ ವತಿಯಿಂದ ಲಾಯಿಲ ಗ್ರಾಮದ ಕಕ್ಕೆನ ಎಂಬಲ್ಲಿ ನೂತನ ವಾಗಿ ನಿರ್ಮಿಸಲಾದ ಸಂಘದ ನೂತನ ಕಟ್ಟಡ ಗಾಣಿಗ ಸಮುದಾಯ ಭವನ ದ ಉದ್ಘಾಟನಾ ಸಮಾರಂಭವು ನ.3 ರಂದು ಜರುಗಲಿದೆ. ಉಜಿರೆ ಲಕ್ಷ್ಮೀ ಗ್ರೂಪ್ಸ್‌ನ ಲೀಲಾ ರವರು ನೂತನ ಸಭಾಭವನದ ಉದ್ಘಾಟನೆಯನ್ನು ನೆರವೇರಿಸಲಿದ್ದು, ಬೆಳ್ತಂಗಡಿ ತಾಲೂಕು ಗಾಣಿಗರ ಯಾನೆ ಸಫಲಿಗರ ಸಂಘದ ಅಧ್ಯಕ್ಷ ಲಕ್ಷ್ಮಣ ಸಫಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರಂಭದಲ್ಲಿ ದೀಪ ಪ್ರಜ್ವಲನೆಯನ್ನು ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಗಾಣಿಗರ ಯಾನೆ ಸಫಲಿಗರ ಸಂಘದ ಗೌರವಾಧ್ಯಕ್ಷ, ತುಮಕೂರು ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಪ್ರಭಾಕರ, ದ.ಕ ಜಿಲ್ಲಾ ಗಾಣಿಗರ ಯಾನೆ ಸಫಲಿಗರ ಸಂಘದ ಅಧ್ಯಕ್ಷ ತಾರಾನಾಥ ಸುವರ್ಣ, ದಿ ಕರಾವಳಿ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎ.ಎಸ್ ವೆಂಕಟೇಶ್, ಬೆಂಗಳೂರಿನ ಉದ್ಯಮಿ ತ್ರಿವಿಕ್ರಮ, ಮಂಗಳೂರು ಗಾಣಿಗರ ಯಾನೆ ಸಫಲಿಗರ ಸಂಘದ ಅಧ್ಯಕ್ಷ, ಗಾಣರತ್ನ ಪ್ರಶಸ್ತಿ ಪುರಸ್ಕೃತ ಕೆ.ನಾರಾಯಣ ಸಫಲ್ಯ, ಬಂಟ್ವಾಳ ಗಾಣಿಗರ ಯಾನೆ ಸಫಲಿಗರ ಸಂಘದ ಅಧ್ಯಕ್ಷ ರಘು ಸಫಲ್ಯ, ತಾ.ಪಂ. ಸದಸ್ಯರಾದ ಧನಲಕ್ಷ್ಮೀ ಜನಾರ್ದನ್, ಸುಧಾಕರ, ಮಲವಂತಿಗೆ ಗ್ರಾ.ಪಂ ಅಧ್ಯಕ್ಷ ನಾರಾಯಣ ಪಾಠಾಳಿ, ಲಾಲ ಗ್ರಾ.ಪಂ ಅಧ್ಯಕ್ಷೆ ವೀಣಾ ರಾವ್, ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.