HomePage_Banner_
HomePage_Banner_
HomePage_Banner_

ಅಂತಾರಾಷ್ಟ್ರೀಯ ಫಿಡೆ ರೇಟೆಡ್ ಮುಕ್ತ ಚೆಸ್ ಪಂದ್ಯಾಟ ಗಿರೀಶ್ ಎ. ಕೌಶಿಕ್‌ಗೆ ಎಸ್.ಡಿ.ಎಂ. ರೋಟೋ ಲಾಯರ್‍ಸ್ ಕಪ್

Advt_NewsUnder_1

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ, ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು, ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಎಸ್.ಡಿ.ಎಂ. ಕಲ್ಯಾಣ ಮಂಟಪದಲ್ಲಿ ನಡೆದ ಅಂತಾರಾಷ್ಟ್ರೀಯ ಫಿಡೆ ರೇಟೆಡ್ ಎಸ್.ಡಿ.ಎಂ. ರೋಟೋ ಲಾಯರ್‍ಸ್ ಕಪ್ ಮುಕ್ತ ಚೆಸ್ ಪಂದ್ಯಾಟದಲ್ಲಿ ಕರ್ನಾಟಕದ ಗಿರೀಶ್ ಎ. ಕೌಶಿಕ್ ಏಳೂವರೆ ಅಂಕಗಳೊಂದಿಗೆ ಎಸ್.ಡಿ.ಎಂ. ರೋಟೊ ಲಾಯರ್‍ಸ್ ಕಪ್ ಹಾಗೂ ಒಂದು ಲಕ್ಷ ರೂ. ನಗದು ಬಹುಮಾನ ಪಡೆದರು.
ಚಕ್ರವರ್ತಿ ರೆಡ್ಡಿ ಎರಡನೆ ಬಹುಮಾನ ಹಾಗೂ ಝಾರ್ಖಂಡ್‌ನ ಸ್ವರಾಜ್ ಪಾಲಿತ್ ಮೂರನೆ ಬಹುಮಾನ ಪಡೆದರು. ಕರ್ನಾಟಕದ ಗ್ರಾಂಡ್ ಮಾಸ್ಟರ್ ಗಿರೀಶ್ ಎ. ಕೌಶಿಕ್ ಮೂರು ಡ್ರಾ ಮತ್ತು ಆರು ಸುತ್ತಿನಲ್ಲಿ ವಿಜೇತರಾಗಿ ಅಂತಿಮ ಸುತ್ತಿನಲ್ಲಿ ತಮಿಳುನಾಡಿನ ಶೇಖರ್ ಬಿ. (ಏಳು ಅಂಕಗಳು) ಡ್ರಾ ಪಡೆದರು.
ಪ್ರಥಮ ಸ್ಥಾನಕ್ಕಾಗಿ ಗಿರೀಶ್ ಎ. ಕೌಶಿಕ್ ಮತ್ತು ಐ.ಎಂ. ಚಕ್ರವರ್ತಿ ರೆಡ್ಡಿ, ಎಂ. ಮಧ್ಯೆ ಟೈ ಇದ್ದರೂ ಆರನೇ ಸುತ್ತಿನಲ್ಲಿ ಚಕ್ರವರ್ತಿ ರೆಡ್ಡಿ ಸೋತು ಎರಡನೆ ಸ್ಥಾನ ಪಡೆದರು.
ತಮಿಳುನಾಡಿನ ಗ್ರಾಂಡ್ ಮಾಸ್ಟರ್ ವಿಷ್ಣುಪ್ರಸನ್ನ ವಿ. ೨೫೦೫ ಇಎಲ್‌ಒ ರೇಟಿಂಗ್ ಪಡೆದರೆ, ಕರ್ನಾಟಕದ ಗ್ರಾಂಡ್ ಮಾಸ್ಟರ್ ಗಿರೀಶ್ ಎ. ಕೌಶಿಕ್ ೨೫೦೧ ಇಎಲ್‌ಒ ರೇಟಿಂಗ್ ಪಡೆದರು. ೫ ದಿನ ನಡೆದ ಚೆಸ್ ಪಂದ್ಯಾಟದಲ್ಲಿ ೧೨ ರಾಜ್ಯಗಳಿಂದ ೧೫೦ ಸ್ಪರ್ಧಿಗಳು ಭಾಗವಹಿಸಿದರು.
ಪುತ್ತೂರಿನ ಅನಿತಾ, ವಿಟ್ಲದ ಮನಸ್ವಿನಿ, ಉಜಿರೆಯ ಆಕಾಂಕ್ಷ, ದೀಕ್ಷಾ ಮತ್ತು ದಿನೇಶ್ ಪೈ ಪಂದ್ಯಾಟದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಅ. ೨೮ ರಂದು ನಡೆದ ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲಾ ಉಪ ರಾಜ್ಯಪಾಲ ರಿತೇಶ್ ಬಾಳಿಗಾ, ರಾಘವೇಂದ್ರ, ಮೇಜರ್ ಜನರಲ್ ಎಂ.ವಿ. ಭಟ್, ರತ್ನವರ್ಮ ಬುಣ್ಣು, ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಲೋಬೊ, ಜಯರಾಂ, ಶ್ರೀಕೃಷ್ಣ ಶೆಣೈ, ಪ್ರತಾಪಸಿಂಹ ನಾಯಕ್ ಭಾಗವಹಿಸಿ ಬಹುಮಾನ ವಿತರಿಸಿದರು. ಸಲೀಂ ಬೇಗ್ ಮುಖ್ಯ ತೀರ್ಪುಗಾರರಾಗಿ ಹಾಗೂ ಸುದೀಪ್ ಎಸ್ ಮತ್ತು ಸಾಕ್ಷಾತ್ ಯು.ಕೆ. ಸಹ ತೀರ್ಪುಗಾರರಾಗಿ ಸಹಕರಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.