ಲಾಯಿಲ ಜ್ಯೋತಿ ಆಸ್ಪತ್ರೆಯಲ್ಲಿ ಉಬ್ಬಿದ ರಕ್ತನಾಳ ಲೇಸರ್ ಚಿಕಿತ್ಸಾ “ವೆರಿಕೋಸ್ ವೀನ್” ಯಂತ್ರ ಉದ್ಘಾಟನೆ

 

ಲಾಯಿಲ: ಅತ್ಯಂತ ಕಡಿಮೆ ದರದಲ್ಲಿ ಖಚಿತವಾದ ಆರೋಗ್ಯ ಸೇವೆ ಒದಗಿಸುತ್ತಾ ಪ್ರಸಿದ್ಧಿ ಪಡೆದು ಯಶಸ್ವಿ ಹೆಜ್ಜೆಗಳನ್ನಿಡುತ್ತಿರುವ ಲಾಲ ಜ್ಯೋತಿ ಆಸ್ಪತ್ರೆಯಲ್ಲಿ ತಾಲೂಕಿನಲ್ಲೇ ಮೊದಲ ಬಾರಿಗೆ ತೆರೆದಿರುವ “ವೆರಿಕೋಸ್ ವೀನ್” ಉಬ್ಬಿದ ರಕ್ತನಾಳ ಲೇಸರ್ ಚಿಕಿತ್ಸಾ ಯಂತ್ರದ ಉದ್ಘಾಟನೆ ಅ. ೩೦ ರಂದು ಜರುಗಿತು.


ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧಿಕಾರಿ ಬಿಷಪ್ ಲಾರೆನ್ಸ್ ಮುಕ್ಕುಯಿ ನೂತನ ಯಂತ್ರದ ಆಶೀರ್ವಾದ ವಿಧಿ ಪೂರೈಸಿದರು. ಉದ್ಘಾಟನೆಯನ್ನು ಉಜಿರೆ ಎಸ್‌ಡಿಎಂ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಬಾಲಕೃಷ್ಣ ಭಟ್ ನೆರವೇರಿಸಿದರು.


ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ. ಫಾ ಜೋಸ್ ವಲಿಯಪರಂಬಿಲ್, ಲಾಲ ಗ್ರಾ.ಪಂ ಕಾರ್ಯದರ್ಶಿ ರೇಷ್ಮಾ, ತಾ.ಪಂ ಸಂಯೋಜಕ ಜಯಾನಂದ ಲಾಲ ಇವರು ಶುಭ ಕೋರಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಸಿ. ಸುಬಿನ್ ಜೋಸ್ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕಿ ಡಾ| ಸಿಸ್ಟರ್ ಅನುಜಾ ವಂದನಾರ್ಪಣೆಗೈದರು. ಜನರಲ್ ಸರ್ಜನ್ ಡಾ| ಸಿಸ್ಟರ್ ಅಂಗ್ರೇಪ್ ಪ್ರಸ್ತಾವನೆಗೈದರು. ಸಾರ್ವಜನಿಕ ಸಂಪರ್ಕಾಧಿಕಾರಿ ದಿವ್ಯಾ ಸೂರಜ್ ವಳಂಬ್ರ ಕಾರ್ಯಕ್ರಮ ನಿರೂಪಿಸಿದರು.
ಮ್ಯಾಟ್:
“ವಿರಿಕೋಸ್ ವೀನ್” ಯಂತ್ರದ ಸಹಾಯದಿಂದ ಕಾಲಿನ ಮೇಲೆ ಉಬ್ಬಿದ ರಕ್ತನಾಳದ ನಿರ್ಮೂಲನಾ ಚಿಕಿತ್ಸೆಯನ್ನು ಆಪರೇಶನ್ ಇಲ್ಲದೆ ಕೇವಲ ಲೇಸರ್ ಮೂಲಕ ಗುಣಪಡಿಸಬಹುದಾಗಿದೆ. ಜ್ಯೋತಿ ಆಸ್ಪತ್ರೆಯಲ್ಲಿ ಇದು ತಾಲೂಕಿನಲ್ಲೇ ಮೊದಲ ಯಂತ್ರವಾಗಿದ್ದು ಜನರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.