ಯುವವಾಹಿನಿ ಬೆಳ್ತಂಗಡಿ ಘಟಕದಿಂದ ತುಳುನಾಡ ತುಡರ ಪರ್ಬ-ಸಾಮೂಹಿಕ ದೀಪಾವಳಿ ಆಚರಣೆ

ಗುರುವಾಯನಕೆರೆ: ಯುವವಾಹಿನಿ ಬೆಳ್ತಂಗಡಿ ಘಟಕ ಆಶ್ರಯದಲ್ಲಿ ಯುವವಾಹಿನಿ ಮಹಿಳಾ ಸಂಚಾಲನಾ ಸಮಿತಿ, ಬೆಳ್ತಂಗಡಿ ತಾಲೂಕು ಸಹಭಾಗಿತ್ವದೊಂದಿಗೆ ಗೆಳೆಯರ ಬಳಗ ಗುರುವಾಯನಕೆರೆ, ಶಾರದಾಂಭ ಭಜನಾ ಮಂಡಳಿ, ಗುರುವಾಯನಕೆರೆ ಶ್ರೀಗುರು ಮಿತ್ರ ಸಮೂಹ ಬೆಳ್ತಂಗಡಿ, ವಿದ್ಯಾನಿಕೇತನ ನೃತ್ಯಶಾಲೆ ಗುರುವಾಯನಕೆರೆ, ಇವರ ಸಹಕಾರದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ತುಳುನಾಡ ತುಡರ ಪರ್ಬ ಸಾಮೂಹಿಕ ದೀಪಾವಳಿ ಆಚರಣೆ ಅ.26 ರಂದು ಗುರುವಾಯನಕೆರೆ ಶಾರದಾ ಮಂಟಪದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಇದರ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನಿರೂಪಕ ದಿನೇಶ ಸುವರ್ಣ ರಾಯಿ ಮಾತನಾಡುತ್ತಾ ತುಳುನಾಡಿನಲ್ಲಿ ಮಣ್ಣಿನ ಪರಿಮಳ ಪಸರಿಸುವ ದೀಪಾವಳಿ ಆಚರಣೆ ಪ್ರಕೃತಿಯನ್ನು ಪೂಜಿಸುವ ಹಬ್ಬವಾಗಿದೆ. ಈ ಪ್ರಕೃತಿಯ ಬೇಸಾಯ ಸಂಘಟನೆಯ ಬದುಕನ್ನು ನೆನಪಿಸುವ ಆಚರಣೆ ಎಂದಿಗೂ ಶಾಶ್ವತವಾಗಿರಲಿ ಎಂದರು. ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ನರೇಶ್ ಸಸಿಹಿತ್ಲು ಉದ್ಘಾಟಿಸಿ ಸಾಮೂಹಿಕವಾಗಿ ಇಂತಹ ಆಚರಣೆಯೊಂದಿಗೆ ಎಲ್ಲರನ್ನೂ ಒಟ್ಟುಗೂಡಿಸುವ ಕಾಯಕದೊಂದಿಗೆ ತುಳುನಾಡ ಸಂಸ್ಕೃತಿ ಆಚರಣೆಯನ್ನು ಸಮಾಜಕ್ಕೆ ತಿಳಿಸುವ ಮೂಲಕ ಬೆಳೆಸುವ ಕಾರ್ಯವನ್ನು ಯುವವಾಹಿನಿ ಬೆಳ್ತಂಗಡಿ ಘಟಕ ಮಾಡಿದೆ. ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರೀಶ್ ಸುವರ್ಣ ಕನ್ಯಾಡಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಜನಪ್ರಿಯ ವೈದ್ಯ ಗುರುವಾಯನಕೆರೆಯ ಡಾ| ವೇಣುಗೋಪಾಲ ಶರ್ಮಾರವರನ್ನು ಸನ್ಮಾನಿಸಲಾಯಿತು. ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಗುರುವಾಯನಕೆರೆ, ಗೆಳೆಯರ ಬಳಗದ ಅಧ್ಯಕ್ಷ ಮೋಹನ್ ಕಂಚಿಂಚೆ, ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ ಅಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ, ಶ್ರೀ ಶಾರದಾಂಭ ಭಜನಾ ಮಂಡಳಿಯ ಅಧ್ಯಕ್ಷೆ ರೀತಾ .ವೈ ಆಚಾರ್ಯ, ವಿದ್ಯಾನಿಕೇತನ ನೃತ್ಯ ಶಾಲಾ ನಿರ್ದೇಶಕಿ ಹರ್ಷಿತಾ ಟಿ.ಪಿ  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ತಾ.ಪಂ ಸದಸ್ಯ ಗೋಪಿನಾಥ ನಾಯಕ್, ಯುವವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.
ಯುವವಾಹಿನಿ ಬೆಳ್ತಂಗಡಿ ಘಟಕದ ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಮಚ್ಚಿನ ಸ್ವಾಗತಿಸಿ ಗೆಳೆಯರ ಬಳಗ ಗುರುವಾಯನಕೆರೆಯ ಮಾಜಿ ಅಧ್ಯಕ್ಷ ಆನಂದ ಕೊಟ್ಯಾನ್ ವಂದಿಸಿದರು. ಪ್ರಜ್ಞಾ ಓಡಿಲ್ನಾಳ ಮತ್ತು ಸುಧಾ ರಮಾನಂದ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.