HomePage_Banner_
HomePage_Banner_
HomePage_Banner_

ನೆರೆ ಪೀಡಿತ ಪ್ರದೇಶದ ಕೃಷಿಕರ ಸಾಲದ ಅವಧಿ ವಿಸ್ತರಣೆಗೆ ಆಗ್ರಹ ಸಹಕಾರ ಸಚಿವರಿಗೆ ಎನ್.ಎಸ್ ಗೋಖಲೆಯವರಿಂದ ಮನವಿ

 

ಮುಂಡಾಜೆ: ನೆರೆ ಪೀಡಿತರಾಗಿ ತೀವ್ರ ತೊಂದರೆಗೊಳಗಾಗಿರುವ ರೈತರ ಸಾಲದ ಅವಧಿ ವಿಸ್ತರಣೆ ಮಾಡಬೇಕು, ಇರುವ ಸಾಲವನ್ನು ದೀರ್ಘಾವಧಿ ಸಾಲವಾಗಿ ಪರಿವರ್ತಿಸಬೇಕು, ಕಂತು ಸಮಯ ವಿಸ್ತರಣೆ ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಕೃಷಿಕರ ಪರವಾಗಿ ಮುಂಡಾಜೆ ಸಹಕಾರಿ ಸಂಘದ ಅಧ್ಯಕ್ಷ, ಹಿರಿಯ ಸಹಕಾರಿ ಎನ್. ಎಸ್ ಗೋಖಲೆ ಅ. 24 ರಂದು ರಾಜ್ಯ ಸಹಕಾರ ಸಚಿವರೂ ಆಗಿರುವ ಗೃಹ ಸಚಿವ ಎಸ್.ಆರ್ ಬೊಮ್ಮಾಯಿ ಅವರಿಗೆ ಧರ್ಮಸ್ಥಳದಲ್ಲಿ ಮನವಿ ನೀಡಿ ಆಗ್ರಹಿಸಿದ್ದಾರೆ.


ಈ ಸಂದರ್ಭ ಶಾಸಕ ಹರೀಶ್ ಪೂಂಜ, ತಹಶಿಲ್ದಾರ್ ಗಣಪತಿ ಶಾಸ್ತ್ರಿ, ಸಹಕಾರಿ ಸಂಘದ ಸಿಇಒ ನಾರಾಯಣ ಫಡ್ಕೆ ಮತ್ತು ನಿರ್ದೇಶಕ ಪ್ರಕಾಶ್ ನಾರಾಯಣ ಚಾರ್ಮಾಡಿ ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.