ತಾಲೂಕು ಸಹಕಾರ ಭಾರತಿಯಿಂದ ಅರವಿಂದ ಜೈನ್ ವಜಾ

ಬೆಳ್ತಂಗಡಿ: ಮಡಂತ್ಯಾರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ  ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಸೂಚನೆಯನ್ನು ಧಿಕ್ಕರಿಸಿ, ಸಹಕಾರ ಭಾರತಿ ವಿರುದ್ದ ಚಟುವಟಿಕೆಗಳನ್ನು ನಡೆಸಿದ್ದ, ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಅರವಿಂದ ಜೈನ್ ಶುಕ್ರವಾರ ನಡೆದ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಸಹಕಾರ ಭಾರತಿಯ ಸೂಚನೆಯನ್ನು ಧಿಕ್ಕರಿಸಿ ಸಹಕಾರ ಭಾರತೀಯ ಅಧಿಕೃತ ಅಭ್ಯರ್ಥಿ ವಿರುದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.
ಈ ಬಗ್ಗೆ ಸಹಕಾರ ಭಾರತಿ ಸೂಚನೆಯನ್ನು ಧಿಕ್ಕರಿಸಿದ ಅರವಿಂದ ಜೈನ್ ಹಾಗೂ ನಿರ್ದೇಶಕ ಕುಮಾರ ನಾಯ್ಕ ಅವರನ್ನು ತಕ್ಷಣ ಆದೇಶ ಬರುವಂತೆ ಸಹಕಾರ ಭಾರತಿಯಿಂದ ವಜಾಗೊಳಿಸಲಾಗಿದೆ ಎಂದು ಬೆಳ್ತಂಗಡಿ ತಾಲೂಕು ಸಹಕಾರ ಭಾರತಿ ಅಧ್ಯಕ್ಷ ಸುಂದರ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.