ಉಜಿರೆಯ ಖ್ಯಾತ ಉದ್ಯಮಿ ಮೂರ್ಜೆ ವಾಸುದೇವ ಪ್ರಭು ಹೃದಯಾಘಾತದಿಂದ ನಿಧನ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಇಲ್ಲಿಯ ಖ್ಯಾತ ಉದ್ಯಮಿ, ಮೂರ್ಜೆ ವಾಸುದೇವ ಪ್ರಭು(83.ವ) ರವರು ಹೃದಯಾಘಾತದಿಂದ ಇಂದು ಬೆಳಿಗ್ಗೆ (ಅ.23) ಉಜಿರೆ ರಥಬೀದಿಯಲ್ಲಿರುವ  ಸ್ವಗೃಹದಲ್ಲಿ ದಲ್ಲಿ ನಿಧನರಾಗಿದ್ದಾರೆ. ಉಜಿರೆ ಸುದರ್ಶನ ಕಾಂಪ್ಲೆಕ್ಸ್ ಕಾಮಧೇನು ಹೊಟೇಲ್ ಬಳಿ ಮೂರ್ಜೆ ಸ್ಟೋರ್ಸ್ ಎನ್ನುವ ತಾಲೂಕಿನ ಹಿರಿಯ ದಿನಸಿ ವ್ಯಾಪಾರ ಮಳಿಗೆ ನಡೆಸುತ್ತಿದ್ದರು. ಕಳೆದ 3-4 ವರ್ಷಗಳ ಹಿಂದೆ ಅವರು ನಿವೃತಿ ಸ್ವೀಕರಿಸಿ ವಿಶ‍್ರಾಂತ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ ಮನೋರಮಾ, ಮೂರು ಮಂದಿ ಮಕ್ಕಳಾದ, ಮಂಗಳೂರಿನಲ್ಲಿ ಇಂಜಿನಿಯರ್ ಅಗಿರುವ ರಾಘವೇಂದ್ರ, ಭಾರತೀಯ ಭೂ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸಿಕ್ಕೀಮ್ ಬೋರ್ಡರ್‌ನಲ್ಲಿ ಕರ್ತವ್ಯದಲ್ಲಿರುವ ನರಸಿಂಹ ಪ್ರಭು, ದುಬಾಯಿಯ ಬ್ರಿಟೀಶ್ ಏರ್‌ವೇಸ್ ನಲ್ಲಿ ಇಂಜಿನಿಯರ್ ಆಗಿರುವ ಚಂದ್ರಶೇಖರ ಪ್ರಭು, ಇಬ್ಬರು ಹೆಣ್ಣುಮಕ್ಕಳಾದ, ದುಬಾಯಿಯಲ್ಲಿ ಅಮೇರಿಕನ್ ಮೂಲದ ಜಿ ಗ್ರೂಪ್ ಆಫ್ ಕಂಪೆನಿಯ ಲೆಕ್ಕಪರೀಶೋಧಕರಾಗಿರುವ ನಯನಾ ಮಲ್ಯ, ಬೆಂಗಳೂರು ಖಾಸಗಿ ಕಂಪೆನಿಯಲ್ಲಿ ಬಿಸ್ನೆಸ್ ಮೆನೇಜ್‌ಮೆಂಟ್ ಉದ್ಯೋಗದಲ್ಲಿರುವ ಪ್ರತಿಭಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಅ. 24 ನಾಳೆ ಅಂತ್ಯಕ್ರಿಯೆ:
ಮೃತರ ಅಂತ್ಯಸಂಸ್ಕಾರ ವಿಧಿಗಳಲ್ಲಿ ಭಾಗಿಯಾಗಲು ಎಲ್ಲಮಕ್ಕಳೂ ಊರಿಗೆ ಮರಳುತ್ತಿದ್ದು ಆ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆಯಿಂದ (ಅ. 24) ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದ್ದು ಬಳಿಕ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಉಜಿರೆ ಶಾಂತಿಧಾಮ ರುಧ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.