ನಾಳೆ ಡಾ| ಹೆಗ್ಗಡೆ ಪಟ್ಟಾಭಿಷೇಕದ 52ನೇ ವರ್ಧಂತ್ಯುತ್ಸವ

ಕಂಗೊಳಿಸಿಲಿದೆ ಚತುರ್ವಿಧ ದಾನದ ಬೀಡು

ಬೆಳ್ತಂಗಡಿ: ಚತುರ್ವಿಧ ದಾನಕ್ಕಾಗಿ ನಾಡಿನೆಲ್ಲೆಡೆ ಪ್ರಸಿದ್ದಿ ಪಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 52ನೇ ವರ್ಧಂತ್ಯುತ್ಸವು ಅ.24ರಂದು ಜರಗಲಿದೆ.
ಪಟ್ಟಾಭಿಷೇಕದ ಪ್ರಯುಕ್ತ ಅ.24ರಂದು ಸಂಜೆ 4 ಗಂಟೆಗೆ ಧರ್ಮಸ್ಥಳ ಶ್ರೀ ಮಹೋತ್ಸವ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸುವರು. ಶಾಸಕ ಹರೀಶ್ ಪೂಂಜ ಮತ್ತು ವಿ.ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಂಗೊಳಿಸಲಿದೆ ಧರ್ಮಸ್ಥಳ
ಕ್ಷೇತ್ರದ ದೇವಸ್ಥಾನ ಬೀಡು, ಬಸದಿ, ಅಮೃತ ವರ್ಷಿಣಿ ಸಭಾಭವನ, ವಸತಿಛತ್ರಗಳು ಅಲಂಕೃತಗೊಳ್ಳಲಿದೆ. ಶ್ರೀ ಮಂಜುನಾಥ ಸ್ವಾಮಿ ದೇಗುಲ, ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆ ನಡೆಯಲಿದೆ. ನಾಡಿನ ಗಣ್ಯರು ವಿವಿಧ ಸಂಸ್ಥೆಗಳ ನೌಕರರು, ಭಕ್ತರು, ಅಭಿಮಾನಿಗಳು, ಊರ-ಪರವೂರ ನಾಗರಿಕರು, ಡಾ| ಹೆಗ್ಗಡೆಯವರಿಗೆ ಫಲಪುಷ್ಪ ಸಮರ್ಪಿಸಿ ಗೌರವಿಸುತ್ತಾರೆ. ಧರ್ಮಸ್ಥಳದ ಗ್ರಾಮಸ್ಥರು, ವ್ಯಾಪರಸ್ಥರು, ನೌಕರರು ಮತ್ತು ಭಕ್ತರು ಸೇರಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.