ಸುದ್ದಿ ‘ದೀಪಾವಳಿ ಸಂಚಿಕೆ’ ಬಿಡುಗಡೆ

                                                                                          ನೈಜ ವರದಿಯೊಂದಿಗೆ ಪತ್ರಿಕೆಯ ಗೌರವ ಹೆಚ್ಚಾಗಿದೆ: ಬ್ರಹ್ಮಾನಂದ ಶ್ರೀ

ಬೆಳ್ತಂಗಡಿ: ನೈಜ ವರದಿಯೊಂದಿಗೆ ಪತ್ರಿಕೆಯ ಗೌರವ ಹೆಚ್ಚಾಗಿದೆ ಎಂದು ಧರ್ಮಸ್ಥಳ ನಿತ್ಯಾನಂದ ನಗರ ಶ್ರೀ ರಾಮಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮನಾಂದ ಸರಸ್ವತಿ ಸ್ವಾಮೀಜಿ ಹೇಳಿದರು. ಅವರು ಅ.21 ರಂದು ಕ್ಷೇತ್ರದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ದೀಪಾವಳಿ ವಿಶೇಷ ಸಂಚಿಕೆ-2019 ನ್ನು ಬಿಡುಗಡೆಗೊಳಿಸಿ, ಆಶೀರ್ವದಿಸಿ ಮಾತನಾಡಿದರು. ತಾಲೂಕಿನ ಗ್ರಾಮಾಂತರ ಸಮಗ್ರ ವರದಿಯೊಂದಿಗೆ, ಕಳೆದ 34 ವರ್ಷಗಳಿಂದ ಎಲ್ಲಾ ವರ್ಗದ ಜನರ ವಿಶ್ವಾಸಕ್ಕೆ ಸುದ್ದಿ ಪತ್ರಿಕೆ ಪಾತ್ರವಾಗಿದೆ. ಮುಂದಕ್ಕೂ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ವ್ಯವಸ್ಥಾಪಕ ಮಂಜುನಾಥ ರೈ, ದೀಪಾವಳಿ ಸಂಚಿಕೆಯ ಕಾರ್ಯನಿರ್ವಾಹಕ ತುಕಾರಾಮ ಬಿ, ಸಹಾಯಕ ವ್ಯವಸ್ಥಾಪಕ ಜಾರಪ್ಪ ಪೂಜಾರಿ ಬೆಳಾಲು, ಪ್ರಸರಣ ವಿಭಾಗದ ಮುಖ್ಯಸ್ಥ ತಿಮ್ಮಪ್ಪ ಗೌಡ, ಜಾಹೀರಾತು ವಿಭಾಗದ ಹೆರಾಲ್ಡ್ ಪಿಂಟೊ, ಶ್ರೀರಾಮ ಕ್ಷೇತ್ರದ ಮೇಲ್ವಿಚಾರಕ ಧರ್ಮಣ ಗೌಡ, ಜಯಶಂಕರ್ ಎಂ.ಬಿ, ಮೆನೇಜರ್ ಕೃಷ್ಣಪ್ಪ ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.