ಬೆಳ್ತಂಗಡಿ: ನಿನಾದ ಸಂಗೀತ ಸಂಭ್ರಮ

ಬೆಳ್ತಂಗಡಿ: ಇಲ್ಲಿಯ ಸಂತೆಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ನಿನಾದ ಸಂಗೀತ ಶಾಲೆಗೆ ಐದು ವರ್ಷ ತುಂಬಿದ ಸಂಭ್ರಮದಲ್ಲಿ ನಿನಾದ ಸಂಗೀತ ಸಂಭ್ರಮ ಕಾರ್ಯಕ್ರಮವು ಸುವರ್ಣ ಆರ್ಕೇಡ್‌ನಲ್ಲಿ ಜರುಗಿತು.
ಸಂತೆಕಟ್ಟೆ ವಿಜಯವಾಣಿ ನಿವಾಸದ ವಾಣಿ ವಿಜಯ ಕುಮಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥೆಯ ಪೋಷಕರಾದ ಸುರೇಂದ್ರ ಆಳ್ವ ಕುರಿಯ ಏಳ್ನಾಡುಗುತ್ತು ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ಸಂಗೀತ ಆಡಿಯೋ ಪುತ್ತೂರು ಇವರ ಸಹಕಾರದೊಂದಿಗೆ, ನಿನಾದ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸುಮಧುರ ಸಂಗೀತ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಗೆ ಸಹಕರಿಸಿದ ವಾಣಿ ವಿಜಯ ಕುಮಾರ್ ಹಾಗೂ ಮಾಜಿ ಯೋಧ ಮಂಜಪ್ಪ ಎಲ್ ಪಡಂಗಡಿಯವರನ್ನು ಸನ್ಮಾನಿಸಲಾಯಿತು ಹಾಗೂ ಶಾಲೆಯ ಗುರುವೃಂದಕ್ಕೆ ಗೌರವಾರ್ಪಣೆ ಸಲ್ಲಿಸಲಾಯಿತು. ಮಂಜಪ್ಪ ಎಲ್ ಪಡಂಗಡಿ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಪೋಷಕಿ ನಿರೂಪ ಆಳ್ವ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.