ಡಾ| ಎಸ್.ಆರ್. ವಿಘ್ನರಾಜರಿಗೆ ವಿದ್ವತ್ ಪರಂಪರಾ ಪ್ರಶಸ್ತಿ

ಉಜಿರೆ: ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ| ಎಸ್.ಆರ್. ವಿಘ್ನರಾಜ ವಿದ್ವತ್ ಪರಂಪರಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇದೇ ನ.೧ರಂದು ಕಾಂತಾವರದಲ್ಲಿ ನಡೆಯಲಿರುವ ಕಾಂತಾವರ ಉತ್ಸವದಲ್ಲಿ ಅವರಿಗೆ ಪಂಡಿತ ಯಜ್ಞನಾರಾಯಣ ಉಡುಪ ಪ್ರತಿಷ್ಠಾನದ ವತಿಯಿಂದ ವಿದ್ವತ್ ಪರಂಪರಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಹಸ್ತಪ್ರತಿ ಶಾಸ್ತ್ರದಲ್ಲಿ ವಿಶೇಷ ಪರಿಣತರಾದ ಡಾ| ವಿಘ್ನರಾಜ, ಎಸ್.ಆರ್. ದಕ್ಷಿಣ ಭಾರತದ ಲಿಪಿಗಳಾದ ಕನ್ನಡ, ತುಳು, ಮಾಲೆಮಾಳ, ತೆಲುಗು, ನಂದಿನಾಗರಿ ಮತ್ತು ಮರಾಠಿ ಲಿಪಿಗಳಲ್ಲಿರುವ ಹನ್ನೆರಡು ಸಾವಿರಕ್ಕೂ ಮಿಕ್ಕಿ ಜೈನ, ವೈದಿಕ ಮತ್ತು ವೀರಶೈವ ಮತ ಧರ್ಮಗಳಿಗೆ ಸಂಬಂಧಪಟ್ಟ ಗ್ರಂಥಗಳನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.