ನಿವೃತ್ತ ಮುಖ್ಯ ಶಿಕ್ಷಕ ನಮಿರಾಜ ಹೆಗ್ಡೆ ಮಲ್ಲಿಪಾಡಿ ನಿಧನ

ಗುರುವಾಯನಕೆರೆ: ಇಲ್ಲಿಯ ಅಯ್ಯಪ್ಪ ಗುಡಿ ಬಳಿಯ ನಿವಾಸಿ ಮೂಲತಃ ಪಡಂಗಡಿ ಗ್ರಾಮದ ಮಲ್ಲಿಪಾಡಿಯವರಾದ ನಿವೃತ್ತ ಮುಖ್ಯ ಶಿಕ್ಷಕ ನಮಿರಾಜ ಹೆಗ್ಡೆ ಮಲ್ಲಿಪಾಡಿ(೮೪ವ) ಅವರು ಅ.೧೪ರಂದು ಸಂಜೆ ನಿಧನರಾದರು.
ನಮಿರಾಜ ಹೆಗ್ಡೆಯವರು ಸ.ಹಿ.ಪ್ರಾ ಶಾಲೆ ಸೋಣಂದೂರು, ಪುಂಜಾಲಕಟ್ಟೆ, ಮಾದರಿ ಶಾಲೆ ಬೆಳ್ತಂಗಡಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಂತರ ಭಡ್ತಿಗೊಂಡು ಗುರುವಾಯನಕೆರೆ ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತೃರಾಗಿದ್ದರು. ಅವರು ಶಿಕ್ಷಣ ಕ್ಷೇತ್ರದಲ್ಲಿ ಸುಮಾರು ೩೭ ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿದ್ದು, ತಮ್ಮ ಸೇವಾ ಅವಧಿಯ ಶಾಲೆಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಿ, ಅತ್ಯುತ್ತಮ ಶಾಲಾ ಪ್ರಶಸ್ತಿ ಮತ್ತು ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯಿಂದ ಪುರಸ್ಕಾರಗೊಂಡಿದ್ದರು.
ಜೈನ ಧರ್ಮದ ತತ್ವ ಆದರ್ಶಗಳನ್ನು ಮೈಗೊಡಿಸಿಗೊಂಡಿದ್ದ ಅವರು ದಶಲಕ್ಷಣ ಪರ್ವ ಅಚರಣೆಯ ನೇತೃತ್ವವನ್ನು ವಹಿಸಿ ಯಶಸ್ವಿಯಾಗಿ ನಡೆಯುವಲ್ಲಿ ಶ್ರಮಿಸಿದ್ದರು. ಬೆಳ್ತಂಗಡಿ ಬಸದಿಯಲ್ಲಿ ಪೂಜಾ ಸಮಿತಿ ಕಾರ್ಯದರ್ಶಿಯಾಗಿ, ಜೈನ ಶ್ರಾವಕ ಸಂಘದ ಕಾರ್ಯದರ್ಶಿಯಾಗಿ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿ ಕಾರ್ಯ ನಿರ್ವಹಿಸಿದ್ದರು.
ಮೃತರು ಪತ್ನಿ ಶ್ರೀಮತಿ ಶಾಂತ ಬಂಧು ವರ್ಗದವರನ್ನು, ಅಪಾರ ಸಂಖ್ಯೆಯಲ್ಲಿ ಶಿಷ್ಯವರ್ಗದವರನ್ನು ಅಗಲಿದ್ದಾರೆ. ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ವಸಂತ ಬಂಗೇರ, ಜಿ.ಪ.ಸ ಮಮತಾ ಶೆಟ್ಟಿ, ತಾ.ಪ.ಸ ಗೋಪಿನಾಥ ನಾಯಕ್, ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ಸದಸ್ಯ ಪುರಂದರ ಶೆಟ್ಟಿ, ರಾಹುಲ್ ಬಲ್ಲಾಳ್ ಮಂಗಳೂರು, ಪ್ರಸನ್ನ ಪಡಿವಾಳ್, ಎಂ.ಆರ್ ಜೈನ್, ಧರಣೇಂದ್ರ ಕೆ. ಜೈನ್, ಜೈನ್‌ಮಿಲನ್ ಅಧ್ಯಕ್ಷ ಪಾಶ್ವನಾಥ ಜೈನ್ ಹಾಗೂ ಸಮಾಜ ಬಾಂಧವರು, ಊರಿನ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.