HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಅಡಿಕೆ ಬೆಳೆಗಾರರ ರಕ್ಷಣೆಗೆ ಸರಕಾರ ಸ್ಪಂದಿಸ ಬೇಕು ವಿಧಾನ ಸಭೆಯಲ್ಲಿ ಶಾಸಕ ಹರೀಶ್ ಪೂಂಜ ಆಗ್ರಹ

 

ಬೆಳ್ತಂಗಡಿ: ದಕ ಜಿಲ್ಲೆಯ ಅಡಿಕೆ ಬೆಳೆಗಾರರ ರಕ್ಷಣೆಗೆ ಸರಕಾರ ಶೀಘ್ರವಾಗಿ ಸ್ಪಂದಿಸಬೇಕು ಎಂದು ಶಾಸಕ ಹರೀಶ್ ಪೂಂಜ ಆಗ್ರಹಿದ್ದಾರೆ
ಅವರು ಶುಕ್ರವಾರ ವಿಧಾನ ಮಂಡಲ ಅಧಿವೇಶನದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಆಗಿರುವ ನೆರೆಯಿಂದ ಹಾನಿಗೀಡಾಗಿರುವ ಕೃಷಿ‌ ಮನೆಗಳ ಹಾನಿಯ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಚಿವರ ಗಮನವನ್ನು ಸೆಳೆದರು


ಕಳೆದ ವರ್ಷದ ಭಾರೀ ‌ಮಳೆಗೆ ದಕ ಜಿಲ್ಲೆಯಲ್ಲಿ ಅಡಿಕೆ ಕೃಷಿ ಕೊಳೆರೋಗದಿಂದ ಹಾನಿಯಾಗಿತ್ತು. ಆದರೆ ಕೆಲ ಕೃಷಿಕರಿಗೆ ಇನ್ನೂ ಪರಿಹಾರ ಮೊತ್ತ ಸಿಕ್ಕಿಲ್ಲ. ಅದರೊಂದಿಗೆ ಈ ಭಾರಿ ಕೂಡಾ ಅಡಿಕೆ ಕೃಷಿಕರು ಮಳೆಯಿಂದಾಗಿ ತೊಂದರೆಗೆ ಸಿಲುಕಿದ್ದಾರೆ. ತಕ್ಷಣ ಮುಖ್ತಮಂತ್ರಿಗಳು ದಕ ಜಿಲ್ಲೆಯ ಅಡಿಕೆ ಕೃಷಿಕರ ನೆರವಿಗೆ ದಾವಿಸಬೇಕು ಎಂದು ವಿನಂತಿಸಿದರು
ಇತ್ತೀಚಿನ ಪೃಕೃತಿ ವಿಕೋಪದಿಂದ ತಾಲೂಕಿನ 17 ಗ್ರಾಮಗಳಲ್ಲಿ ಭಾರೀ ಹಾನಿಯಾಗಿದೆ. ಮನೆ, ಕೃಷಿ ಹಾನಿಯಾಗಿದೆ.ಸರ್ಕಾರ ಸಂತ್ರಸ್ತರ ನೆರವಿಗೆ ತಕ್ಷಣ ಬಂದಿದೆ. ಅದಕ್ಜೆ ಮುಖ್ಯಮಂತ್ರಿಗಳಿಗೆ, ಹಾಗೂ ಸಹಕಾರ ನೀಡಿದ ಸಂಘಸಂಸ್ಥೆಗಳಿಗೆ ಧನ್ಯವಾದ ನೀಡಿದ ಶಾಸಕರು, ಅದರೊಂದಿಗೆ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದನೆ ನೀಡಿದ ಆರ್ ಎಸ್ ಎಸ್ ಕಾರ್ಯಕರ್ತರಿಗೂ ಕೃತಜ್ಷತೆ ಸಲ್ಲಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.