ಎಲ್‌ಐಸಿ ಪ್ರತಿನಿಧಿ ದಿನೇಶ್ ಗೌಡ ಬರೆಂಗಾಯ ನೇಣಿಗೆ ಶರಣು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಲೂಕಿನ ನಿಡ್ಲೆ ಗ್ರಾಮದ ಬರೆಂಗಾಯ ನಿವಾಸಿ, ಸುದ್ಧಿ ಪತ್ರಿಕಾ ವಿತರಕ ಮಾಲಿಂಗ ಗೌಡರ ಪುತ್ರ, ಎಲ್‌ಐಸಿ ಏಜೆಂಟ್ ದಿನೇಶ್ ಗೌಡ (40ವ.) ಅವರು ಅ. 12 ರಂದು ನೇಣಿಗೆ ಶರಣಾಗಿದ್ದಾರೆ.


ರಾತ್ರಿ ಎಂದಿನಂತೆ 10 ಗಂಟೆವರೆಗೆ ಯಾರಲ್ಲೋ ದೂರವಾಣಿ ಮೂಲಕ ಮಾತನಾಡುತ್ತಿದ್ದರು. ಬೆಳಿಗ್ಗೆ ಮನೆಯ ಸನಿಹ ಕೊಟ್ಟಿಗೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ತಂದೆ, ತಾಯಿ ಬಾಲಕ್ಕ, ಪತ್ನಿ ಯಶೋಧಾ, ಇಬ್ಬರು ಹೆಣ್ಣು ಮಕ್ಕಳಾದ ಸಾನ್ವಿ(10ವ.) ಮತ್ತು ಯಜ್ಞಶ್ರೀ(7ವ.) ಸಹೋದರ ಜಯರಾಮ, ಮತ್ತು  ಸಹೋದರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಖಿನ್ನತೆಯೇ ಕಾರಣವೇ?
ದಿನೇಶ್ ಗೌಡ ಅವರು ಈಕೃತ್ಯವೆಸಗಲು ಮಾನಸಿಕ ಖಿನ್ನತೆಯೇ ಕಾರಣವೇ ಎಂಬ ಅನುಮಾನ ಮೂಡಿದೆ. ಹಿಂದಿನಿಂದಲೂ ಅವರಿಗೆ ಅಲ್ಪ ಮಟ್ಟದಲ್ಲಿ ಖಿನ್ನತೆ ಇತ್ತೆನ್ನಲಾಗಿದ್ದು, ಎರಡು ದಿನಗಳ ಹಿಂದೆ ತಾಯಿಯ ಬಳಿ ಮಾತನಾಡುತ್ತಾ, “ನನಗೆ ಹಿಂದಿನಂತೆಯೇ ಆಗುತ್ತಿದೆ, ಒಮ್ಮೆ ಶಿವಮೊಗ್ಗಕ್ಕೆ ಟ್ರೀಟ್‍ಮೆಂಟ್‍ಗೆ ಹೋದರೆ ಆದೀತು’ ಎಂದು ಹೇಳಿದ್ದರೆನ್ನಲಾಗಿದೆ. ಜೊತೆಗೆ ಪತ್ನಿಯ ಬಳಿ, ಪಣೊಲಿಬೈಲು ಕ್ಷೇತ್ರಕ್ಕೆ ಹೋಗುವ ಬಗ್ಗೆಯೂ ಮಾತನಾಡಿದ್ದರು ಎಂದು ತಿಳಿದುಬಂದಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.