ಕೊಯ್ಯೂರು: ತಾಲೂಕು ಮಟ್ಟದ ಕ್ರೀಡಾಕೂಟದ ಪೂರ್ವಭಾವಿ ಸಭೆ

ಕೊಯ್ಯೂರು: ಇಲ್ಲಿಯ ಕೊಯ್ಯೂರು ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕರ ಬಾಲಕಿಯರ ಕ್ರೀಡಾಕೂಟದ ಪೂರ್ವಭಾವಿ ಸಭೆ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್ ಪಿ ಸಭೆಯನ್ನು ಉದ್ಘಾಟಿಸಿ, ಅಥ್ಲೆಟಿಕ್ಸ್ ಕ್ರೀಡಾಕೂಟವು ವಿದ್ಯಾರ್ಥಿಗಳ ವೈಯಕ್ತಿಕ ಸಾಧನೆಗೆ ಪ್ರೋತ್ಸಾಹ ನೀಡುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಸಿದ್ದಗೊಳಿಸಬೇಕು ಮತ್ತು ಮುಂದೆ ಕೊಯ್ಯೂರು ಪ್ರೌಢಶಾಲೆಯ ನೇತೃತ್ವದಲ್ಲಿ ನಡೆಯುವ ತಾಲೂಕು ಮಟ್ಟದ ಕ್ರೀಡಾಕೂಟದ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು ಎಂದರು.
ತಾ.ಪಂ.ಸದಸ್ಯ ಪ್ರವೀಣ್ ಗೌಡ ಮಾವಿನಕಟ್ಟೆ ಅಧ್ಯಕ್ಷತೆ ವಹಿಸಿ, ಕ್ರೀಡಾ ಕೂಟದ ವ್ಯವಸ್ಥೆಗೆ ಸುಮಾರು 4ಲಕ್ಷ ರೂ ಖರ್ಚು ಅಂದಾಜಿಸಲಾಗಿದ್ದು, ಕ್ರೀಡಾಭಿಮಾನಿಗಳ ಸಹಕಾರ ಕೋರಿದರು.
ದ.ಕ ಜಿಲ್ಲಾ ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಯುವರಾಜ ಅನಾರ್, ಬೆಳ್ತಗಂಡಿ ತಾಲೂಕು ಗ್ರೇಡ್ ೨ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ ದೇವಾಡಿಗ, ತಾಲೂಕು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ, ಶಿಕ್ಷಣ ಸಂಯೋಜಕ ರಮೇಶ್, ಬಿ.ಐ.ಆರ್.ಟಿ ಸೂರ್ಯನಾರಾಯಣ ಪುತ್ತೂರುರಾಯ, ದಾಮೋದರ ಗೌಡ ಬೆರ್ಕೆ, ಮೋಹನ ಕರಾಯ, ತಾಲೂಕಿನ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರು, ಸಿ.ಆರ್.ಪಿ. ಹಾಗೂ ಬಿ ಆರ್.ಪಿ ಯವರು ಭಾಗವಹಿಸಿದ್ದರು. ಬೆಳ್ತಂಗಡಿ ತಾಲೂಕು ಮಟ್ಟದ ಕ್ರೀಡಾಕೂಟ ವನ್ನುಅ.18 ಮತ್ತು ಅ.19 ರಂದು ಸರಕಾರಿ ಪ್ರೌಢಶಾಲೆಯ ನೇತೃತ್ವದಲ್ಲಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಸುವುದಾಗಿ ತೀರ್ಮಾನಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತಚ್ಚಮೆ ಸ್ವಾಗತಿಸಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್ ಜೆ. ಪ್ರಸಾವಿಸಿ, ಅನಂತರಾಮ ನೂರಿತ್ತಾಯ ವಂದಿಸಿ, ರಾಮಚಂದ್ರ ದೊಡಮನಿ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.