ಕಾಯರ್ತಡ್ಕದಲ್ಲಿ ರಬ್ಬರ್ ಖರೀದಿ ಕೇಂದ್ರ “ಸಿ.ಕೆ ರಬ್ಬರ್” ಪ್ರಾರಂಭೋತ್ಸವ

Advt_NewsUnder_1
Advt_NewsUnder_1
Advt_NewsUnder_1

     

ಕಾಯರ್ತಡ್ಕ: ಇಲ್ಲಿನ ಟ್ರಿನಿಟಿ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ರಬ್ಬರ್ ಖರೀದಿ ಮತ್ತು ರಬ್ಬರ ಉತ್ಪನ್ನಗಳ ಮಾರಾಟ ಮಳಿಗೆ ಸಿ.ಕೆ ರಬ್ಬರ್ ಇದರ ಉದ್ಘಾಟನೆಯು ಅ. 3 ರಂದು ಜರುಗಿತು.
ಜರ್ಮನಿಯಲ್ಲಿರುವ ಧರ್ಮಗುರು ರೆ.ಫಾ. ಜೇಮ್ಸ್ ಪಟ್ಟೇರಿ, ಕಾಯರ್ತಡ್ಕ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನ ಧರ್ಮಗುರು ರೆ. ಫಾ. ಫ್ರಾನ್ಸಿಸ್ ಓಡಂಪಳ್ಳಿ ಆಶೀರ್ವಚನ ವಿಧಿ ನೆರವೇರಿಸಿದರು.
ಸಮಾರಂಭದಲ್ಲಿ ಬೇಬಿ ಕೆ.ಕೆ, ಕುರಿಯನ್ ಕೆ.ಪಿ, ತ್ರೇಸಿಯಮ್ಮ ಕುರಿಯನ್, ಮ್ಯಾಥ್ಯೂ ಕೆ.ಕೆ, ಸಜಿ ಸಿ.ವಿ, ಸಣ್ಣಿ, ಸಿಲ್ವಿ ಸಣ್ಣಿ, ಹಾಗೂ ಮಾಲಕರ ಕುಟುಂಬವರ್ಗ ಮತ್ತು ಮಿತ್ರರು ಭಾಗಿಯಾಗಿದ್ದರು. ಪ್ರಶಾಂತ್ ಅವರು ಪ್ರಥಮ ಗ್ರಾಹಕರಾಗಿ ರಬ್ಬರ್ ಶೀಟ್ ನೀಡಿದರು.

ಸಂಸ್ಥೆಯ ಆಡಳಿತ ಪಾಲುದಾರ ಡೊಮೆನಿಕ್ ಕೆ.ಕೆ, ಅವರ ಪತ್ನಿ ಮಂಜು ಡೊಮೆನಿಕ್, ಪಾಲುದಾರ, ಮಾಜಿ ಸೈನಿಕ ಸುನೀಶ್ ಸಿ.ವಿ ಮುಂಡಾಜೆ, ಅವರ ಪತ್ನಿ ಮೇರಿ ಸುನೀಶ್, ಮಕ್ಕಳಾದ ಸಂಜನಾ ಸಿ.ಎಸ್ ಮತ್ತು ಸಚಿನ್ ಸಿ. ಎಸ್ ಇವರು ಆಹ್ವಾನಿತ ಗಣ್ಯರನ್ನು ಬರಮಾಡಿಕೊಂಡು ಗೌರವ ಸಲ್ಲಿಸಿದರು.


ನೂತನ ಮಳಿಗೆಯಲ್ಲಿ ರಬ್ಬರ್ ಶೀಟ್ ಮತ್ತು ಇತರ ಪೂರಕ ಉತ್ಪನ್ನಗಳ ಖರೀದಿ, ರಬ್ಬರ್ ಕೃಷಿಗೆ ಪೂರಕವಾದ ಏಸಿಡ್, ಟ್ಯಾಪಿಂಗ್ ನೈಫ್, ರಬ್ಬರ್ ಕ್ಲಿಪ್ಸ್, ರಬ್ಬರ್ ಕಪ್ಸ್, ಸುತ್ತುಲಿ, ಚಿಲ್, ಟಾರ್ಚ್ ಲೈಟ್, ಡಿಶ್ ಇತ್ಯಾಧಿ ಉತ್ಪನ್ನಗಳು ಮಿತದರಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.