ನಾಳ ನವರಾತ್ರಿ ಪೂಜೆ- ಪಕ್ಷ ಭಜನೆ

ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮದ ಪ್ರಯುಕ್ತ ಮಹಮ್ಮಾಹಿ ಮಹಿಳಾ ಮರಾಠಿ ಭಜನಾ ವೇದಿಕೆ ಕೊಂಬೆಟ್ಟು ಪುತ್ತೂರು ಇವರಿಂದ ಭಜನಾ ಕಾರ್ಯ ಕ್ರಮವು ಅ .4 ರಂದು ಮಧ್ಯಾಹ್ನ ದೇವಸ್ಥಾನದಲ್ಲಿ  ಜರಗಿತು.

ಈ ಸಂದರ್ಭದಲ್ಲಿ, ವಸಂತಿ ದರ್ಬೆ, ಮೀನಾಕ್ಷಿ ಮಂಜುನಾಥ, ವಿಜಯ ಪರ್ಲಡ್ಕ, ಭವಾನಿ ಪರಮೇಶ್ವರ್, ಮೋಹಿನಿ ಬಲ್ನಾಡು, ಗೌರಿ ಬರೆಪ್ಪಾಡಿ, ಲಕ್ಷ್ಮೀ ಕೊಡಿಪಾಡಿ, ಹೇಮಾವತಿ ನಗರ, ಲಲಿತ ವೈ ಮತ್ತು ಹಾರ್ಮೋನಿಯಂ ಶಿವಾನಂದ ಶೈಣೈ ಪುತ್ತೂರು, ಉಪಸ್ಥಿತರಿದ್ದು ಭಜನಾ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಮಜಲು ಶಾಲು ಹೊದಿಸಿ, ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಪ್ರಸಾದ-ಫಲ ಪುಷ್ಪ ನೀಡಿ ಗೌರವಿಸಿದರು. ದೇವಸ್ಥಾನದ ವ್ಯವಸ್ಥಾಪಕ ಗಿರೀಶ ಶೆಟ್ಟಿ ಗೇರುಕಟ್ಟೆ ,ಭಜನಾ ಮಂಡಳಿ ಕಾರ್ಯದರ್ಶಿ ಸತೀಶ್ ಭಂಡಾರಿ ನಾಳ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.