ಬೆಳ್ತಂಗಡಿ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾಗೃತಿ

ಬೆಳ್ತಂಗಡಿ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅ. ೨ ರಿಂದ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಪ್ಲಾಸ್ಟಿಕ್ ಬಳಕೆ ನಿಷೇಧ ಜ್ಯಾರಿಗೆ ತರಲಾಗಿದೆ. ಗಾಂಧಿ ಜಯಂತಿ ದಿನಾಚರಣೆ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಸ್ವಚ್ಛತಾ ಜಾಥಾ ಮತ್ತು ಶ್ರಮದಾನ ಮಾಡುವ ಮುಖಾಂತರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಕಾರ್ಯಕ್ರಮ ನಡೆಯಿತು.
ತಹಶೀಲ್ದಾರ್ ಗಣಪತಿ ಶಾಸ್ತ್ರಿಯವರ ಸಮ್ಮುಖದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮತ್ತು ನಿಯಂತ್ರಣದ ಪ್ರತಿಜ್ಞಾ ಸ್ವೀಕಾರ ನಡೆಯಿತು. ಚುನಾಯಿತ ಪ್ರತಿನಿಧಿಗಳು, ಲಯನ್ಸ್, ರೋಟರಿ, ಜೇಸೀಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪಂಚಾಯತ್ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗ, ಇತರ ಸಾರ್ವಜನಿಕ ಬಂಧುಗಳು ಶ್ರಮದಾನದ ಯಶಸ್ವಿಗೆ ಸಹಕರಿಸಿದರು.
ತಾನೇ ಕಸ ಹೆಕ್ಕಿದ ತಹಶಿಲ್ದಾರ್:
ತಹಶೀಲ್ದಾರ್ ಶ್ರೀ ಗಣಪತಿ ಶಾಸ್ತ್ರಿ ಯವರ ನಾಯಕತ್ವ ಅನುಕರಣೀಯ ವಾಗಿದ್ದು ಕೆಲವು ನಿರ್ದಿಷ್ಟ ಸ್ದಳಗಳಲ್ಲಿ ಸ್ವಯಂ ತಾನೇ ಸ್ವಚ್ಛ ಮಾಡಿದರು. ಇನ್ನು ಮುಂದೆ ಕಸ ಹಾಕುವುದನ್ನು ನಿಲ್ಲಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶವನ್ನೂ ನೀಡಿದರು.
ಪ್ಲಾಸ್ಟಿಕ್ ನಿಷೇಧ ಮತ್ತು ನಿಯಂತ್ರಣ ಕುರಿತು ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ಕರಪತ್ರ ವಿತರಣೆ, ಧ್ವನಿ ವರ್ಧಕ ದ ಮೂಲಕ ಪ್ರಸಾರ ಮಾಡಲಾಯಿತು. ನಗರದ ವಿವಿಧ ಆಯ್ದ ಭಾಗಗಳಲ್ಲಿ ಪ್ರತಿಜ್ಞಾ ಸ್ವೀಕಾರ ಮೂಲಕ ಪ್ಲಾಸ್ಟಿಕ್ ಮುಕ್ತ ಬೆಳ್ತಂಗಡಿ ಪಟ್ಟಣವಾಗಿ ಮಾರ್ಪಡಿಸಲು ದೃಢ ಸಂಕಲ್ಪ ಕೈಗೊಳ್ಳಲಾಯಿತು.
.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.