ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆ

 

ಬೆಳ್ತಂಗಡಿ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಮಹಾಸಭೆಯಲ್ಲಿ ನೂತನ ನಿರ್ದೇಶಕರು ಗಳನ್ನು ಆಯ್ಕೆ ಮಾಡಲಾ ಗಿದ್ದು ಅ . 2 ರಂದು ಸಂಘದ ಗೌರವಾಧ್ಯಕ್ಷ ಮಾಜಿ ಶಾಸಕ ಕೆ.ವಸಂತ ಬಂಗೇರರ ನೇತೃತ್ವದಲ್ಲಿ ನಿರ್ದೇಶಕರು ಗಳ ಸಭೆಯಲ್ಲಿ ಮುಂದಿನ 2 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಎನ್. ಪದ್ಮನಾಭ ಮಾಣಿಂಜ, ಪ್ರಧಾನ ಕಾರ್ಯದರ್ಶಿ ಯಾಗಿ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಬೆಳಾಲು, ಕೋಶಾಧಿಕಾರಿಯಾಗಿ ಎ.ಪಿ.ಎಮ್.ಸಿ ಸದಸ್ಯ ಚಿದಾನಂದ ಎಲ್ದಕ್ಕ ಶಿರ್ಲಾಲು ಸರ್ವಾನುಮತದಿಂದ ಆಯ್ಕೆಯಾದರು.


ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ನ್ಯಾಯವಾದಿ ಮನೋಹರ ಕುಮಾರ್ ಇಳಂತಿಲ, ಜೊತೆಕಾರ್ಯದರ್ಶಿಯಾಗಿ, ಚಂದ್ರಹಾಸ ಕೇದೆ, ನಿರ್ದೇಶಕರುಗಳಾಗಿ ಸುಜಿತಾ ವಿ. ಬಂಗೇರ ಬೆಳ್ತಂಗಡಿ , ಜಗದೀಶ್ ಡಿ. ಬೆಳ್ತಂಗಡಿ , ಉಮೇಶ್ ಕುಮಾರ್ ಬೆಳ್ತಂಗಡಿ, ಹರಿಶ್ಚಂದ್ರ ಕೋಡ್ಲಕ್ಕೆ, ಗುಣಾಕರ ಅಗ್ನಾಡಿ ಕರಾಯ, ಹರೀಶ್ ಸಾಲ್ಯಾನ್ ನಾವೂರು, ಶೇಖರ್ ಕೆ. ಬೆಳ್ತಂಗಡಿ, ಜಯಕುಮಾರ್ ನಡ, ದಯಾನಂದ ಪೊಂಗರ್ದಡಿ ಚಾರ್ಮಾಡಿ, ಉಣ್ಣಿಕೃಷ್ಣನ್ ತೋಟತ್ತಾಡಿ, ಪ್ರಭಾಕರ ಪೂಜಾರಿ ಧರ್ಮಸ್ಥಳ, ಹರಿಪ್ರಸಾದ್ ಹೊಸಂಗಡಿ, ಯಶೋಧಾ ನಿತ್ಯಾನಂದ ಕುತ್ಲೂರು, ವಿಶ್ವನಾಥ ಪೂಜಾರಿ, ಗುಂಡೂರಿ, ಯುವರಾಜ ಎಲ್ಯೋಟ್ಟು ಬಳಂಜ, ಶ್ರೀಧರ ಪೂಜಾರಿ ಪರಿಮುಗ ಗರ್ಡಾಡಿ, ಇವರುಗಳು ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಶ್ರೀಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಕಂಡೆತ್ಯಾರು ಪ್ರಕ್ರೀಯೆ ನಡೆಸಿದರು. ನೂತನ ಅಧ್ಯಕ್ಷರಾಗಿರುವ ಪದ್ಮನಾಭ ಮಾಣಿಂಜ ಅವರು ಈ ಹಿಂದೆಯೂ ಒಂದು ಬಾರಿ ಸಂಘದ ಅಧ್ಯಕ್ಷರಾಗಿ ಮುನ್ನಡೆಸಿದ್ದರು. ಪ್ರಸ್ತುತ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಶ್ರೀ ಗುರುದೇವ ಎಜ್ಯುಕೇಶನಲ್ ಟ್ರಸ್ಟ್‌ನ ಉಪಾಧ್ಯಕ್ಷರಾಗಿ, ರಬ್ಬರ್ ಸೊಸೈಟಿ ಉಜಿರೆ ಉಪಾಧ್ಯಕ್ಷರಾಗಿ ಸೇರಿದಂತೆ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.