ಬೆಳ್ತಂಗಡಿ ಮುಳಿಯ ಚಿನ್ನೋತ್ಸವದ ಉದ್ಘಾಟನೆ

 

ಬೆಳ್ತಂಗಡಿ: ಬೆಳ್ತಂಗಡಿ ಮುಳಿಯದಲ್ಲಿ ಮುಳಿಯ ಚಿನ್ನೋತ್ಸವದ ಉದ್ಘಾಟನಾ ಸಮಾರಂಭವು ಅ.2 ರಂದು ನಡೆಯಿತು.
ಬೆಳ್ತಂಗಡಿ ದಂತ ವೈದ್ಯ ಡಾ| ರಾಘವೇಂದ್ರ ದೀಪ ಬೆಳಗಿಸುವುದರೊಂದಿಗೆ ಚಿನ್ನೋತ್ಸವ ಉದ್ಘಾಟಿಸಿ ಮುಳಿಯ ಜ್ಯುವೆಲ್ಸ್ ಸಂಸ್ಥೆಯು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಇಂದು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ ಎಂದು ಶುಭ ಹಾರೈಸಿದರು.

ಗಿರಿಗಿಟ್ ಸಿನೆಮಾ ಖ್ಯಾತಿಯ ನಟಿ ಶಿಲ್ಪಾ ಶೆಟ್ಟಿ ಅಪ್ಸರಾ ರೋಸ್ ಗೋಲ್ಡ್ ಕಲೆಕ್ಷನ್ ಅನಾವರಣಗೊಳಿಸಿ ಮಾತನಾಡಿ ಮುಳಿಯ ಜುವೆಲ್ಲರ್ ಕಳೆದ  ಹಲವು ವರ್ಷಗಳಿಂದ ಉದ್ಯೋಮದೊಂದಿಗೆ ಸಮಾಜ ಸೇವೆ ಮಾಡಿತ್ತಿದ್ದು ಎಲ್ಲರ ಅಚ್ಚು ಮೆಚ್ಚಿನ ಸಂಸ್ಥೆಯಾಗಿ ಹೊರಹೊಮ್ಮಿದೆ. ಇಲ್ಲಿ ಗ್ರಾಹಕರಿಗೆ ಪ್ರಾಮಾಣಿಕ ಹಾಗೂ ನಗು ಮೊಗದ ಸೇವೆಯು ದೊರೆತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
ಮುಳಿಯ ಸಂಸ್ಥೆಯ ಮ್ಯಾನೇಜಿಗ್ ಡೈರೆಕ್ಟರ್ ಕೃಷ್ಣ ನಾರಾಯಣ ಮುಳಿಯ ಮಾತನಾಡಿ ಕಳೆದ 25 ವರ್ಷಗಳಿಂದ ಕರ್ನಾಟಕದಲ್ಲಿ 5 ಶೋರೂಂನ್ನು ಹೊಂದಿದ್ದು, ಬೆಳ್ತಂಗಡಿಯಲ್ಲಿ ಕಳೆದ ವರ್ಷ ಸಂಸ್ಥೆಯನ್ನು ಪ್ರಾರಂಭಿಸಿದ್ದು ಇಲ್ಲಿನ ಗ್ರಾಹಕರು ನಮಗೆ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದು ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ, ಅಶ್ವಿನಿ ಕೃಷ್ಣ ನಾರಾಯಣ ಮುಳಿಯ, ಸಂಸ್ಥೆಯ ಸಿಬ್ಬಂದಿ ವರ್ಗದವರು, ಗ್ರಾಹಕರು ಉಪಸ್ಥಿತರಿದ್ದರು. ಗ್ರಾಹಕರ ಪರವಾಗಿ ಶ್ರೀ ಕೃಷ್ಣ ಭಟ್ ಅನಿಸಿಕೆ ವ್ಯಕ್ತಪಡಿಸಿದರು.
ಕಿರ್ತನ್ ಪ್ರಾರ್ಥಿಸಿ, ಸಹಾಯಕ ಪ್ರಬಂದಕ ಸತ್ಯಗಣೇಶ್ ಸ್ವಾಗತಿಸಿ, ಬ್ರಾಂಚ್ ಮ್ಯಾನೇಜರ್ ಪ್ರವೀಣ್ ಪ್ರಾಸ್ತಾವಿಕ ಮಾತನಾಡಿ, ಸಂಜೀವ ಕೆ. ನಿರೂಪಿಸಿ, ರಮೇಶ್ ಗೌಡ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.