ಕೊಯ್ಯೂರು ದೇವಸ್ಥಾನ ಶಾಲಾ ಶಿಕ್ಷಕಿ ಲೀನ ಪಿಂಟೋ ರಿಗೆ ಬೀಳ್ಕೊಡುಗೆ

ಕೊಯ್ಯೂರು: ಸ. ಹಿ. ಪ್ರಾಥಮಿಕ ಶಾಲೆ ಕೊಯ್ಯೂರು ದೇವಸ್ಥಾನ ಇಲ್ಲಿ ದೀರ್ಘ ಸೇವೆ ಸಲ್ಲಿಸಿ ನಿವೃತರಾದ ಶಿಕ್ಷಕಿ ಲೀನಾ ಪಿಂಟೋ ಅವರಿಗೆ ಬೀಳ್ಕೊಡುಗೆ ಸಮಾರಂಭ ಆತ್ಮೀಯವಾಗಿ ನಡೆಯಿತು.
ಉದ್ಘಾಟನೆಯನ್ನು ಸಿ.ಆರ್.ಪಿ ಸುಧಾಕರ ಶೆಟ್ಟಿ ನೆರವೇರಿಸಿದರು.
ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಯಶವಂತ ಗೌಡ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಕೊಯ್ಯೂರು ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಅನಂತಕೃಷ್ಣ ಭಟ್ ಶುಭ ಕೋರಿದರು.
ವೇದಿಕೆಯಲ್ಲಿ ಗ್ರಾ. ಪಂ ಉಫಾಧ್ಯಕ್ಷೆ ರಾಮಣ್ಣ ಗೌಡ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಹರಿಣಾಕ್ಷಿ, ಉಪಸ್ಥಿತರಿದ್ದರು.
ಸಹಶಿಕ್ಷಕಿ ಚೆನ್ನಮ್ಮ ನಿರೂಪಿಸಿದರು. ರಝೀನಾ ಡಿಸೋಜಾ ವಂದನಾರ್ಪಣೆಗೈದರು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷರುಗಳಾದ ಡೀಕಯ್ಯ ಪೂಜಾರಿ, ನೋಣಯ್ಯ ಪೂಜಾರಿ, ಸದಸ್ಯರುಗಳು, ಶಿಕ್ಷಕವೃಂದ, ವಿದ್ಯಾಭಿಮಾನಿಗಳು, ಅಕ್ಷರದಾಸೋಹ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.