ಮುಂಡಾಜೆ ಸದಾಶಿವ ಶೆಟ್ಟರಿಗೆ ಮಂಡೆಚ್ಚ ಪ್ರಶಸ್ತಿ ಪ್ರದಾನ

ಉಜಿರೆ : ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಭಾಗವತರಾದ ದಾಮೋದರ ಮಂಡೆಚ್ಚ, ಕುಬಣೂರು ಶ್ರೀಧರ ರಾಯರಂತವರ ತ್ಯಾಗ ಸದಾ ಸ್ಮರಣೀಯ ಹಣದ ಬೆನ್ನುಹತ್ತದೆ ಕಲೆಗಾಗಿ ತಮ್ಮನ್ನು ಸಮರ್ಪಿಸಿಕೊಂಡ ಅವರಂತ ಕಲಾವಿದರೂ ಆದರ್ಶವಾಗಬೇಕು ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ತಾರಾನಾಡ ವರ್ಕಾಡಿ ಹೇಳಿದರು.
ಅವರು ಸೆ. 25ರಂದು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಕ್ಷಝೇಂಕಾರ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಉಜಿರೆಯ ಮಂಡೆಚ್ಚ ಸಂಸ್ಮರಣಾ ಸಮಿತಿಯ ಸಹಯೋಗದಲ್ಲಿ ನಡೆದ ದಾಮೋದರ ಮಂಡೆಚ್ಚ ಪ್ರಶಸ್ತಿ ಪ್ರದಾನ ಹಾಗೂ ಕುಬಣೂರು ಶ್ರೀಧರ ರಾವ್ ಸಂಸ್ಮರಣೆ ಸಮಾರಂಭದಲ್ಲಿ ಮಾತನಾಡಿದರು. ಕರ್ನಾಟಕ ಮೇಳದ ಖ್ಯಾತ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿಯವರಿಗೆ ಮಂಡೆಚ್ಚ ಪ್ರಶಸ್ತಿ ಪ್ರದಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಸದಾಶಿವ ಶೆಟ್ಟಿ ಕಲ್ಲಾಡಿ ಕೊರಗ ಶೆಟ್ಟರು, ವಿಠಲ ಶೆಟ್ಟರು ಕರ್ನಾಟಕ ಮೇಳದಲ್ಲಿ ತಮ್ಮನ್ನು ಮಕ್ಕಳಂತೆ ನೋಡಿಕೊಂಡಿದ್ದರಿಂದ ಅದೇ ವೇಳದಲ್ಲಿ ಮಂಡೆಚ್ಚರಂತಹ ಭಾಗವತರೊಂದಿಗೆ 25 ವರ್ಷಗಳಷ್ಟು ಕಾಲ ಕಲಿತು, ಕೆಲಸ ಮಾಡುವಂತಾಯ್ತು ಎಂದರು.
ಕಟೀಲು ದೇಗುಲದ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ, ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಕಟೀಲು ಕಾಲೇಜು ಪ್ರಾಚಾರ್‍ಯ ಡಾ| ಕೃಷ್ಣ ಯಕ್ಷ ಝೆಂಕಾರದ ನಿರ್ದೇಶಕ ಡಾ| ಗಣಪತಿ ಭಟ್, ಭಾರತಿ ಶೆಟ್ಟಿ, ಗಣೇಶ್, ಕೃತಿಕಾ ಉಪಸ್ಥಿತರಿದ್ದರು. ಭವ್ಯಶ್ರೀ ಹರೀಶ್, ಚಿನ್ಮಯ ಕಲ್ಲಡ್ಕ, ಧನುಷ್, ಸುಮಿತ್, ಸತ್ಯರಾಜ್, ಸೊರಜ್ ಕುಬಣೂರು ಶ್ರೀಧರ ರಾಯರು ರಚಿಸಿದ ಹಾಡುಗಳನ್ನು ಹಾಡಿ ರಂಜಿಸಿದರು. ಡಾ| ಶುತ ಕೀರ್ತಿರಾಜ್ ಸ್ವಾಗತಿಸಿ, ಉಪನ್ಯಾಸಕ ಸಂತೋಷ್ ಆಳ್ವ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.