ಗೇರುಕಟ್ಟೆ ಪ್ರೌಢ ಶಾಲಾ ಶೌಚಾಲಯ ಕಾಮಗಾರಿಗೆ ಶಿಲಾನ್ಯಾಸ ಮತ್ತು ಸೈಕಲ್ ವಿತರಣೆ

ಕಳಿಯ: ಕಳಿಯ ಗ್ರಾ.ಪಂ. ವ್ಯಾಪ್ತಿಯ ಗೇರುಕಟ್ಟೆ ಸರಕಾರಿ ಪ್ರೌಢಶಾಲೆಗೆ ರೂ.10 ಲಕ್ಷ ವೆಚ್ಚದಲ್ಲಿ ಮಂಜೂರಾದ ಶೌಚಾಲಯ ನಿರ್ಮಾಣ ಕಾಮಗಾರಿಗೆ ಶಾಸಕ ಹರೀಶ್ ಪೂಂಜ ಅ.1 ರಂದು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಪ್ರವೀಣ್ ಕುಮಾರ್, ಕಳಿಯ ಗ್ರಾ.ಪಂ. ಸದಸ್ಯರಾದ ಸುಧಾಕರ ಮಜಲು, ದಿವಾಕರ ಎಮ್, ಮೀನಾಕ್ಷಿ, ಪ್ರಮುಖರಾದ ವಸಂತ ಮಜಲು, ರಾಜೇಶ್ ಪೆಂರ್ಬುಡ, ವಿಜಯ ಕುಮಾರ್ ಕಲಾಯಿತೊಟ್ಟು, ಯಾಕುಬ್ ಸುಣ್ಣಲಡ್ಡ, ಕುಶಾಲಪ್ಪ ಗೌಡ ಕಲಾಯಿತೊಟ್ಟು, ಹರೀಶ್ ಗೌಡ ಕೆರೆಕೋಡಿ, ದಿನೇಶ್ ಪೂಜಾರಿ ಗೋವಿಂದೂರು, ಗಣೇಶ್ ನಾಳ, ಲೋಕೇಶ್ ನಾಳ, ಪಕ್ಷದ ಕಾರ್ಯಕರ್ತರು ಮತ್ತು ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಸದಸ್ಯರು, ವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಶಾಲಾ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು,ವಿಧ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಶಾಲೆಯ ೩೬ ವಿದ್ಯಾರ್ಥಿಗಳಿಗೆ ಮಂಜೂರಾದ ಸೈಕಲ್‌ಗಳನ್ನು ವಿತರಿಸಲಾಯಿತು

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.