ವಿಕಲಚೇತನರಿಗೆ ಗುರುತು ಚೀಟಿಗೆ ಆನ್‌ಲೈನ್ ಅರ್ಜಿ

ಉಜಿರೆ: ಕನ್ಯಾಡಿಯ ಸೇವಾಭಾರತಿ ಇದರ ಸೇವಾನಿಕೇತನ ಕಾರ್ಯಾಲಯದಲ್ಲಿ ಇತ್ತೀಚೆಗೆ ವಿಕಲಚೇನದ ವಿಶೇಷ ಗುರುತಿನ ಚೀಟಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ನವಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡಿಸೇಬಲ್ಸ್ ರಾಮನಗರ ಇದರ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್ ಮಂಜುನಾಥ್ ಸಾಂಕೇತಿಕವಾಗಿ ಚಾಲನೆ ನೀಡಿದರು. ಅವರು ವಿಶೇಷ ಗುರುತು ಚೀಟಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಸಂಸ್ಥೆಯಿಂದ ವಿಶೇಷಚೇತನರಿಗೆ ಈ ಅವಕಾಶದಿಂದ ಹೆಚ್ಚಿನ ಅನುಕೂಲ ಪ್ರಯೋಜನ ದೊರೆಯುವಂತಾಗಲೆಂದು ಶುಭಕೋರಿದರು.
ಈ ಸಂದರ್ಭದಲ್ಲಿ ಸೇವಾಭಾರತಿ ಅಧ್ಯಕ್ಷ ಕೆ. ವಿನಾಯಕ ರಾವ್, ಧರ್ಮಸ್ಥಳದ ಹರೀಶ್, ಸುಶ್ಮಿತಾ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.