ಯಸ್ ಯಸ್ ಎಫ್ ಬೆಳ್ತಂಗಡಿ ಡಿವಿಷನ್ “ಹಳೆಬೇರು ಹೊಸ ಚಿಗುರು” ಕಾರ್ಯಕ್ರಮ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) SSF ಬೆಳ್ತಂಗಡಿ ಡಿವಿಷನ್ ವತಿಯಿಂದ ಹಳೆಬೇರು ಹೊಸಚಿಗುರು ಕಾರ್ಯಕ್ರಮವು ಸೆ 29 ರಂದು ಮಧ್ಯಾಹ್ನ 2.00ಗಂಟೆಗೆ ಅನುಗ್ರಹ ಟ್ರೈನಿಂಗ್ ಕಾಲೇಜು ಹಾಲ್ ಬೆಳ್ತಂಗಡಿಯಲ್ಲಿ ಡಿವಿಷನ್‌ ‌ಅಧ್ಯಕ್ಷರಾದ ನಝೀರ್ ಮದನಿ ಪುಂಜಾಲಕಟ್ಟೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. SYS ಬೆಳ್ತಂಗಡಿ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಸಲಾಂ ತಂಙಳ್ ಪುಂಜಾಲಕಟ್ಟೆ ದುವಾ ನೆರವೇರಿಸಿದರು, ಬೆಳ್ತಂಗಡಿ ಸುನ್ನೀ ಸಂಯುಕ್ತ ಜಮಾಅತ್ ಪ್ರ.ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್, ಕಾರ್ಯಕ್ರಮವನ್ನು ಉದ್ಘಾಟಿಸಿದರು.

SSF ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಹಾಫಿಳ್ ಸುಫಿಯಾನ್ ಸಖಾಫಿ ಹಾಗೂ SSF ಬೆಳ್ತಂಗಡಿ ಡಿವಿಷನ್ ಮಾಜಿ ಅಧ್ಯಕ್ಷರಾದ MAM ಕಾಸಿಂ ಮುಸ್ಲಿಯಾರ್ ಮಾಚಾರು ಪ್ರಾಸ್ತಾವಿಕ ಭಾಷಣ ಮಾಡಿದರು.
ಡಿವಿಷನ್ ಮಾಜಿ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಸಖಾಫಿ ತರಗತಿ ಮಂಡಿಸಿದರು.ಈ ಸಂದರ್ಭದಲ್ಲಿ ಡಿವಿಷನ್’ಗೆ ದಶಕಗಳಿಂದ ನಾಯಕತ್ವ ನೀಡಿದ ಮಾಜಿ ನಾಯಕರುಗಳಿಗೆ ಸನ್ಮಾನಿಸಲಾಯಿತು. SSF ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಎಂ.ಶರೀಫ್ ಬೆರ್ಕಳ,ಸದಸ್ಯ ಇಕ್ಬಾಲ್ ಮಾಚಾರು, SSF ದ.ಕ ಈಸ್ಟ್ ಝೋನ್ ಅಧ್ಯಕ್ಷರಾದ ಅಯ್ಯೂಬ್ ಮಹ್ ಳರಿ  ಕಾವಲ್’ಕಟ್ಟೆ, ಹಾಗೂ ಅನುಗ್ರಹ ಸಮೂಹ ಶಿಕ್ಷಣ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ತಲ್’ಹತ್ ಎಂ.ಜಿ, ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಮಾಜಿ ನಾಯಕರುಗಳಾದ ಹಂಝ ಮದನಿ ತೆಂಕ ಕಾರಂದೂರು,ಫಾರೂಕ್ ಸಖಾಫಿ ವೇಣೂರು, ಅಬೂಬಕ್ಕರ್ ಸಮಡೈನ್, ಜಮಾಲುದ್ದೀನ್ ಲತೀಫಿ ಲಾಡಿ, ರಫೀಕ್ ಮುಸ್ಲಿಯಾರ್ ನಾಳ,ಅಶ್ರಫ್ KCF,ನಝೀರ್ ಕಾಂತಿಜಾಲು,ಝೋನ್ ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರ್,ಸದಸ್ಯ ಸಿದ್ದೀಕ್ ಪರಪ್ಪು,ಡಿವಿಷನ್ ಉಪಾಧ್ಯಕ್ಷ ಕೆರೀಂ ಸಖಾಫಿ, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ 5 ಸೆಕ್ಟರ್ ಒಳಗೊಂಡ 50 ಯುನಿಟ್‌ಗಳ ಕಾರ್ಯಕರ್ತರು ಉಪಸ್ಥಿತರಿದ್ದರು.SSF ಬೆಳ್ತಂಗಡಿ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಝುಬೈರ್ ಶಾಂತಿನಗರ ಸ್ವಾಗತಿಸಿದರು. ಡಿವಿಷನ್ ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿ,ಪ್ರಧಾನ ಕಾರ್ಯದರ್ಶಿ ಶರೀಫ್ ನಾವೂರು ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.