ಬೆಳ್ತಂಗಡಿ ನ.ಪಂ: ಜಲಶಕ್ತಿ ಅಭಿಯಾನ

Advt_NewsUnder_1
Advt_NewsUnder_1
Advt_NewsUnder_1

ಳೆಕೊಯ್ಲು ಮಾಹಿತಿ- ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಬೆಳ್ತಂಗಡಿ : ಕಳೆದ ಬೇಸಗೆಯಲ್ಲಿ ನ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ಹಿನ್ನಲೆಯಲ್ಲಿ ಜನರಲ್ಲಿ ನೀರಿಂಗಿಸುವ ಬಗ್ಗೆ ಜಾಗೃತಿಗಾಗಿ ಜಲಶಕ್ತಿ ಅಭಿಯಾನದನ್ವಯ ಮಳೆ ನೀರು ಕೊಯ್ಲು ಕಾರ್ಯಕ್ರಮವು ಸೆ.27ರಂದು ನ.ಪಂ ಸಭಾಂಗಣದಲ್ಲಿ ಜರುಗಿತು.


ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ, ಕಳೆದ ಬೇಸಿಗೆಯಲ್ಲಿ ಹಿಂದೆಂದೂ ಕಾಣದಷ್ಟು ನೀರಿನ ಅಭಾವ ಕಂಡುಬಂದಿದ್ದು, ಮಳೆ ನೀರು ಕೊಯ್ಲು ಅನಿವಾರ್ಯ. ಅದಕ್ಕಾಗಿ ಸೆಪ್ಟಂಬರ್ ಬಳಿಕದ ಮಳೆ ನೀರನ್ನು ಸಂಗ್ರಹಿಸಲು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು. ನಗರ ವ್ಯಾಪ್ತಿಯ 15 ಮನೆಗಳಲ್ಲಿ ಘಟಕ ಸ್ಥಾಪಿಸುವುದು ಮತ್ತು 3 ಬಾವಿಗಳಲ್ಲಿ ಮಳೆ ನೀರನ್ನು ಸಂಗ್ರಹಿಸುವ ಯೋಜನೆಯಿದೆ ಎಂದರು. ಮಂಗಳೂರು ನಿರ್ಮಿತಿ ಕೇಂದ್ರದ ಇಂಜಿನಿಯರ್ ನವೀನ್ ಕುಮಾರ್ ಅವರು ವಿವಿಧ ಮಾದರಿಯಲ್ಲಿ ನೀರನ್ನು ಕೊಯ್ಲು ಮಾಡುವ ಬಗ್ಗೆ ಮಾಹಿತಿ ನೀಡಿ, ಸರಳ ರೀತಿಯಲ್ಲಿ ನೀರನ್ನು ಹೇಗೆ ಮರು ಬಳಕೆ ಮಾಡಬಹುದು ಮತ್ತು ಅದರಿಂದ ಯಾವ ರೀತಿಯಲ್ಲಿ ಆರ್ಥಿಕ ಉಳಿತಾಯ ಸಾಧಿಸಬಹುದು ಎಂಬುದರ ಕುರಿತು ವಿವರ ನೀಡಿದರು. ಪಂಚಾಯತದ ಕಿರಿಯ ಇಂಜಿನಿಯರ್ ಮಹಾವೀರ ಆರಿಗ ಹಾಗೂ ನಾಗರಿಕರು ಉಪಸ್ಥಿತರಿದ್ದರು. ಸಮುದಾಯ ವಿಭಾಗದ ಯೋಜನಾಧಿಕಾರಿ ವೆಂಕಟ್ರಮಣ ಶರ್ಮ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.ನ.ಪಂ ವ್ಯಾಪ್ತಿಯಲ್ಲಿ ಒಮ್ಮೆ ಮಾತ್ರ ಬಳಕೆ ಮಾಡುವ ಪ್ಲಾಸ್ಟಿಕ್‌ನ್ನು ಸಂಪೂರ್ಣ ನಿಷೇಧಿಸಲಾಗುವುದು. ಅ.2ರಿಂದ ಅ.7ರ ತನಕ ವಿವಿಧ ಸಂಘ-ಸಂಸ್ಥೆಗಳ ಜೊತೆ ಸೇರಿಕೊಂಡು 11 ವಾರ್ಡ್‌ಗಳಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುವ ಶ್ರಮದಾನ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಸುಧಾಕರ್ ತಿಳಿಸಿದರು.
ಕಸ ವಿಂಗಡಿಸಿ ಪುನರ್ಬಳಕೆ ಆಗುವ ಪ್ಲಾಸ್ಟಿಕ್‌ನ್ನು ಸಿಮೆಂಟು ಉತ್ಪಾದನಾ ಕಾರ್ಖಾನೆಗಳಿಗೆ ನೀಡಲಾಗುವುದು. ಒಮ್ಮೆ ಬಳಕೆ ಮಾಡುವ ಪ್ಲಾಸ್ಟಿಕ್ ಮಾರಾಟ ಕಂಡು ಬಂದರೆ ಪ್ರಥಮ ಹಂತದಲ್ಲಿ ರೂ.250 ದಂಡ ಹಾಕಲಾಗುವುದು. ಮುಂದುವರಿದರೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು. ಇದು ಪ್ಲೆಕ್ಸ್, ಬ್ಯಾನರ್‌ಗೂ ಅನ್ವಯವಾಗುತ್ತದೆ ಎಂದು ಹೇಳಿದರು. ಸಾರ್ವಜನಿಕ ಜಾಗದಲ್ಲಿ ಕಸ ಎಸೆದರೆ, ವಾಹನದವರು ಕಸ ಎಸೆದರೆ, ತ್ಯಾಜ್ಯದೊಟ್ಟಿಗೆ ವೈದ್ಯಕೀಯ ಚಿಕಿತ್ಸಾ ತ್ಯಾಜ್ಯವನ್ನು ಎಸೆದರೆ ದಂಡ ವಿಧಿಸಲಾಗುವುದು ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.