ಅರಣ್ಯ ಇಲಾಖೆ ಗೋದಾಮಿಗೆ ಮತ್ತೆ ಕಳ್ಳರ ಕನ್ನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೆಲತಿಂಗಳ ಹಿಂದೆ ಅರಣ್ಯ ಇಲಾಖೆಯ ಗೋದಾಮಿನಲ್ಲಿಟ್ಟಿದ್ದ ಭಾರೀ ಬೆಲೆಯ ಶ್ರೀಗಂಧರ ಕೊರಡುಗಳು ಕಳ್ಳತನವಾದ ಬೆನ್ನಿಗೇ ಇದೀಗ ಸೆ. 28 ರ ರಾತ್ರಿ ಇಲ್ಲಿನ ಗೋದಾಮಿನ ಗೋಡೆ ಕೊರೆದು ಮತ್ತೊಮ್ಮೆ ಕಳ್ಳತನಕ್ಕೆ ವಿಫಲ ಯತ್ನವೊಂದನ್ನು ನಡೆಸಿದ ಬಗ್ಗೆ ವರದಿಯಾಗಿದೆ.
ರಾತ್ರಿ 11.50 ರ ಸುಮಾರಿಗೆ ಈ ಘಟನೆ ನಡೆದಿದ್ದು ಅರಣ್ಯ ಇಲಾಖೆಯ ರಾತ್ರಿ ಪಾಳಿಯ ಕಾವಲುಗಾರರು ಎಚ್ಚರಗೊಂಡಾಗ ಕಳ್ಳರು ಕತ್ತಲೆಯ ಮರೆಯಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ದಾಖಲು:
ಗೋಡೆಗೆ ಕನ್ನ ಕೊರೆದ ಬಳಿಕ ಇಬ್ಬರು ಒಳ ನುಸುಳಿರುವುದು ಇಲಾಖೆಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಇಬ್ಬರೂ ಕೂಡ ಮುಸುಕುಧಾರಿಗಳಾಗಿರುವುದರಿಂದ ಪತ್ತೆ ಕಾರ್ಯಕ್ಕೆ ಸ್ವಲ್ಪ ಅಡ್ಡಿಯಾಗಿದೆ. ಇದಕ್ಕೂ ಮುನ್ನ ಚಾಣಾಕ್ಷ ಕಳ್ಳರು ಸಿಸಿ ಕ್ಯಾಮರಾದ ದಿಕ್ಕು ಬದಲಾಯಿಸಿರುವುದು ಇನ್ನೊಂದು ಕ್ಯಾಮರಾದ ಮೂಲಕ ದಾಖಲಾಗಿದೆ.

ಶ್ರೀಗಂಧ ಕಳ್ಳರ ಬಗ್ಗೆ ಇನ್ನೂ ಸುಳಿವಿಲ್ಲ:
ಕಳೆದ ಜು. 13 ರಂದು ಇದೇ ಗೋದಾಮಿನಿಂದ 344 ಕೆ.ಜಿ. ಶ್ರೀಗಂಧ ಕಳವಾಗಿ ತಿಂಗಳುಗಳೇ ಕಳೆದರೂ ಇನ್ನೂ ಕಳ್ಳರ ಪತ್ತೆಯಾಗಿಲ್ಲ. ಆ ಬಳಿಕದ ವಿದ್ಯಮಾನಗಳ ಅನುಸಾರ ಇದೀಗ ಅರಣ್ಯ ಇಲಾಖೆ ಗೋದಾಮಿನ ಸುತ್ತ ಸಿಸಿ ಕ್ಯಾಮರಾ ಕಣ್ಗಾವಲು ಅಳವಡಿಸಿಕೊಂಡಿದೆ.
ಆನೆದಂತ ಎಗರಿಸುವ ಯತ್ನವೇನಾದರೂ ನಡೆಯಿತೇ?

ಈ ಮಧ್ಯೆ ಸೆ. 18 ರಂದು ಉಜಿರೆ ಪರಿಸರದ ರಬ್ಬರ್ ತೋಟದ ಶೆಡ್ಡ್‌ವೊಂದರಲ್ಲಿ ಶೇಖರಿಸಿಟ್ಟು ವ್ಯಾಪಾರ ಕುದುರಿಸುತ್ತಿದ್ದ ಸಂದರ್ಭ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಸುಮಾರು 10 ಆನೆದಂತಗಳನ್ನು ವಶಕ್ಕೆ ಪಡೆದುಕೊಂಡು ಮೂವರನ್ನು ಬಂಧಿಸಿದ ಘಟನೆ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಆರೋಪಿಗಳಿಗೆ ಜಾಮೀನು ಕೂಡ ದೊರೆತಿತ್ತು. ಸದ್ರಿ ಪ್ರಕರಣದ ಮುಂದಿನ ತನಿಖೆಗಾಗಿ ಆನೆದಂತಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಇದರ ಸುಳಿವಿನ ಮೇರೆಗೆ ಅವುಗಳನ್ನು ಲಪಟಾಯಿಸುವ ಉದ್ಧೇಶದಿಂದ ಕಳ್ಳರು ಈ ಕಳ್ಳಕಿಂಡಿ ತೋಡಿದರೇ ಎಂಬ ಸಂಶಯ ವ್ಯಾಪಕವಾಗಿದೆ.

ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು, ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ್ ಸಹಿತ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಕ್ಯಾಮರಾ ಪುಟೇಜ್ ಮತ್ತು ಇತರ ಮಾಹಿತಿಗಳ ಅನ್ವಯ ಮುಂದಿನ ತನಿಖೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.