HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮಡಂತ್ಯಾರು ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ

ಬೆಳ್ತಂಗಡಿ: ಸೆ.26 ರಾಜ್ಯ ಸರಕಾರ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಗ್ರಾ.ಪಂ ಆಯ್ಕೆಯಾಗಿದೆ. ಇದರೊಂದಿಗೆ ದಕ್ಷಿಣ ಕನ್ನಡದ ಒಟ್ಟು ಐದು ಗ್ರಾ.ಪಂ ಗಳು ಪ್ರಶಸ್ತಿಗೆ ಆಯ್ಕೆಯಾದಂತಾಗಿದೆ.


ಕಟ್ಟಡದ ಪ್ರದೇಶದಲ್ಲಿ ಮಿಂಚು ಬಂಧಕ ಅಳವಡಿಸಿರುವ ತಾಲೂಕಿನ ಏಕೈಕ ಗ್ರಾ.ಪಂ ಮಡಂತ್ಯಾರು ಪಂಚಾಯತ್ ಆಗಿದೆ. ಮಳೆನೀರು ಕೊಯ್ಲು ಅಳವಡಿಸಿ ಸಂಗ್ರಹಿಸಿದ ನೀರನ್ನು ಶುದ್ದ ನೀರಿನ ಘಟಕದ ಮೂಲಕ 2ರೂ ಗೆ 5 ಲೀ.ನಂತೆ ಪೂರೈಸುವುದು, ಕುಡಿಯುವ ನೀರಿನ ಸ್ಥಾವರಗಳಿಗೆ ಮೊಬೈಲ್ ಮೂಲಕ ಚಾಲನೆ ವ್ಯವಸ್ಥೆ, ಸಿಎಸ್‌ಆರ್ ನಿಧಿಯಿಂದ ಬೃಹತ್ ಸಭಾಂಗಣ ನಿರ್ಮಾಣ, ತ್ಯಾಜ್ಯ ವಿಲೇವಾರಿಗೆ ವಾಹನದ ಕೊಡುಗೆ, ನೀರಿನ ಬಳಕೆ ಶುಲ್ಕ ವಸೂಲಿಗಾಗಿ ಸಿಂಪ್ಯೂಟರ್ ಬಳಕೆ, ಗ್ರಾ.ಪಂ ವ್ಯಾಪ್ತಿಯಲ್ಲಿ ಮಳೆನೀರು ಕೊಯ್ಲು ಕಡ್ಡಾಯ ಬಳಕೆಗೆ 100 ಕುಟುಂಬಗಳಿಗೆ ತಲಾ 1,000ರೂ ಸಹಾಯಧನ ವಿತರಣೆ, ಇ-ತ್ಯಾಜ್ಯ ಸಂಗ್ರಹಿಸಿ ವಿಲೇವಾರಿಗೊಳಿಸಿದ ಹೆಗ್ಗಳಿಕೆ ಗ್ರಾ.ಪಂ.ನದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.