ತಣ್ಣೀರುಪಂತ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯ ಹಾಗೂ ತಣ್ಣೀರುಪಂತ ವಲಯದ ಜನಜಾಗೃತಿ ಸಭೆಯು ಬಾಪೂಜಿ ಕೇಂದ್ರ ಕಲ್ಲೇರಿಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ತಣ್ಣೀರುಪಂತ ವಲಯದ ಜನಜಾಗೃತಿ ಅಧ್ಯಕ್ಷ ಮೋನಪ್ಪ ಗೌಡ ವಹಿಸಿಕೊಂಡರು. ತಾ | ಜನಜಾಗೃತಿ ವೇದಿಕೆಯ ಅಧ್ಯಕ್ಷ ಶಾರರಾ ಆರ್. ರೈ ಮಾತನಾಡಿ ಅ. 2ರಂದು ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ತಾ| ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಪ್ರಭಾಕರ್ ಪೊಸಂದೋಡಿ ಜನಜಾಗೃತಿ ಕಾರ್ಯಕ್ರಮ ಹಾಗೂ ಗ್ರಾಮ ಸಮಿತಿ ಸಂಘಟನೆಯ ಬಗ್ಗೆ ಮಾತನಾಡಿದರು. ತಣ್ಣೀರುಪಂತ ಗ್ರಾ. ಪಂ. ಅಧ್ಯಕ್ಷ ಜಯವಿಕ್ರಮ ಶುಭಕೋರಿದರು.
ಈ ಸಂದರ್ಭ ಕಣಿಯೂರು ವಲಯದ ನೂತನ ಅಧ್ಯಕ್ಷರಾಗಿ ರುಕ್ಕ್ಮಯ್ಯ ಪೂಜಾರಿ ಅವರನ್ನು ಆರಿಸಲಾಯಿತು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಅಬ್ಬಸ್ ಬಟ್ಲಡ್ಕ, ಪ್ರಗತಿಬಂಧು ವಲಯ ಒಕ್ಕೂಟದ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ, ಜನಜಾಗೃತಿ ತಾ.ಸಮಿತಿ ಸದಸ್ಯ ರಾಜೀವ ರೈ, ಕೃಷಿ ಅಧಿಕಾರಿ ಭಾಸ್ಕರ್ ಉಪಸ್ಥಿತರಿದ್ದರು.
ತನ್ನೀರುಪಂತ ವಲಯ ಮೇಲ್ವಿಚಾರಕಿ ವಿದ್ಯಾ ಸ್ವಾಗತಿಸಿ. ಕಣಿಯೂರು ವಲಯ ಮೇಲ್ವಿಚಾರಕ ಮಾಧವ ಎಂ. ನಿರೂಪಿಸಿದರು. ಸೇವಾಪ್ರತಿನಿಧಿ ಸೀತಾರಾಮ ಆಳ್ವ ಧನ್ಯವಾದ ನೀಡಿದರು.