ದೇಶದ ಗೌರವ ಹೆಚ್ಚಿಸುವ ಕಾರ್ಯ ಯುವ ಸಮುದಾಯದಿಂದಾಗಬೇಕು: ಸೂಲಿಬೆಲೆ

ಉಜಿರೆ: ಜಗತ್ತು ಇಂದು ಭಾರತವನ್ನು ಗೌರವಿಸುತ್ತದೆ ಎಂದಾದರೆ ಭಾರತೀಯರಾದ ನಾವೆಲ್ಲರೂ ಜಗತ್ತು ನಿರೀಕ್ಷಿಸುವುದಕ್ಕಿಂತ ಹೆಚ್ಚಿನ ಕೊಡುಗೆ ನೀಡಿದ್ದೇವೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ. ದೇಶದ ಗೌರವ ಹೆಚ್ಚಿಸುವ ಕಾರ್ಯದತ್ತ ಯುವ 9 ಸಮುದಾಯ ಮುಂದಾಗಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಅವರು ಸೆ.24ರಂದು ಶ್ರೀ ಧ.ಮಂ ಕಾಲೇಜು ಉಜಿರೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವದ ವರ್ಷಾಚರಣೆಯ ಪ್ರಯುಕ್ತ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಯೋಗ ಮತ್ತು ಆಯುರ್ವೇದವನ್ನು ಪರಿಚಯಿಸಿದ ಭಾರತದತ್ತ ಜಗತ್ತು ಮುಖಮಾಡಿದೆ. ಜೀವನದ ಗುರಿ ದ್ವಂದ್ವವಾಗಿದ್ದು, ಬದುಕಿನ ಮೂಲವನ್ನು ಅರಿಯುವ ಅಗತ್ಯವಿದೆ. ಅದಕ್ಕಾಗಿ ಜೀವನದ ಗುರಿಯ ಕಲ್ಪನೆಯನ್ನು ಇಟ್ಟುಕೊಳ್ಳಬೇಕು. ಉದ್ಯೋಗದ ಶಿಕ್ಷಣ ಪಡೆಯುವುದಕ್ಕಿಂತ ಮೊದಲು ಮನಸ್ಸಿನ ಮೇಲಿನ ಏಕಾಗ್ರತೆಯ ಶಿಕ್ಷಣ ಪಡೆಯುವುದು ಅಗತ್ಯವಾಗಿದೆ ಎಂದು ತಿಳಿಸಿದರು.ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಹಾಗೂ ವಿಭಾಗದ ಮುಖ್ಯಸ್ಥ ಡಾ. ಪಿ.ಎನ್ ಉದಯಚಂದ್ರ ಅಧ್ಯಕ್ಷತೆ ವಹಿಸಿದ್ದರು. ಹೇಮಾವತಿ ವಿ. ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯ ಯಶೋವರ್ಮ, ಸಾಹಿತಿ ಎನ್.ಜಿ ಪಟವರ್ಧನ್, ನಿವೃತ್ತ ಪ್ರಾಂಶುಪಾಲ ಮೋಹನ್, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಆಶಾಕಿರಣ್ ಸ್ವಾಗತಿಸಿ, ಪ್ರೊ| ಗಣೇಶ್ ವಿ. ಅತಿಥಿ ಪರಿಚಯ ಮಾಡಿದರು. ಡಾ| ಲಕ್ಷ್ಮೀ ನಾರಾಯಣ ಕೆ.ಎಸ್ ವಂದಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.